ಪೈಲ್ವಾನ್ ರಂಜಾನ್ ಸಾಬ್ ಸ್ಮರಣೆ ಅಗತ್ಯ

ತೆಕ್ಕಲಕೋಟೆಯಲ್ಲಿ ಪಿಂಜಾರ್ ಸಮುದಾಯದ ಸರ್ಕಾರಿ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ತಾಲೂಕು ಅಧ್ಯಕ್ಷ ಎನ್.ವಲಿಪೀರ್ ಉದ್ಘಾಟಿಸಿದರು. ಸಂಘದ ತಾಲೂಕು ಕಾರ್ಯದರ್ಶಿ ಎಂ.ಖಾದರ್ ವಲಿ, ಪೈಲ್ವಾನ್ ರಂಜಾನ್ ಸಾಬ್ ಅವರ ಮೊಮ್ಮಗ ಶರ್ಮಾಸ್ ವಲಿ ಇತರರಿದ್ದರು.

Published on

ಸಿರಗುಪ್ಪ: ಕರ್ನಾಟಕ ಏಕೀಕರಣಕ್ಕಾಗಿ ಪ್ರಾಣ ಅರ್ಪಿಸಿದ ಪೈಲ್ವಾನ್ ರಂಜಾನ್ ಸಾಬ್ ಅವರು ಕನ್ನಡ ನಾಡಿನ ಹೆಮ್ಮೆಯಾಗಿದ್ದು, ಅಪ್ರತಿಮ ಹೋರಾಟಗಾರನನ್ನು ಕನ್ನಡಿಗರು ಸ್ಮರಿಸಬೇಕಿದೆ ಎಂದು ಕರ್ನಾಟಕ ರಾಜ್ಯ ನದಾಫ್/ಪಿಂಜಾರ್ ಸಂಘದ ತಾಲೂಕು ಅಧ್ಯಕ್ಷ ಎನ್.ವಲಿಪೀರ್ ಹೇಳಿದರು.

ತೆಕ್ಕಲಕೋಟೆಯಲ್ಲಿ ಹಜರತ್ ಸೈಯದ್ ಷಾ ಮೆಹಬೂಬ್ ಸುಭಾನಿ (ರೆ.ಹ) ಉರುಸ್ ನಿಮಿತ್ತ ರಾಜ್ಯ ನದಾಫ್/ಪಿಂಜಾರ್ ಸಂಘದ ತಾಲೂಕು ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಪಿಂಜಾರ್ ಸಮುದಾಯದ ಸರ್ಕಾರಿ ನೌಕರರು ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಳ್ಳಾರಿಯ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಅವರ ಹೋರಾಟ ಅವಿಸ್ಮರಣೀಯ ಎಂದರು.

ನಿವೃತ್ತ ಯೋಧ ಎಮ್ಮಿಗನೂರು ಶೇಕ್ಷಾವಲಿ ಮಾತನಾಡಿ, ಏಕೀಕರಣ ವಿಜಯೋತ್ಸವ ವೇದಿಕೆಗೆ ಬೆಂಕಿಹಾಕಲು ದುಷ್ಕರ್ಮಿಗಳು ಹೊಂಚು ಹಾಕಿದ್ದರು. ವೇದಿಕೆ ನಿರ್ಮಾಣದಲ್ಲಿ ತೊಡಗಿದ್ದ ರಂಜಾನ್ ಸಾಬ್ ಆ್ಯಸಿಡ್ ದಾಳಿಗೆ ಒಳಗಾಗಿದ್ದರು. ಅವರು ನಾಡು ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು ಎಂದು ತಿಳಿಸಿದರು.

ಪ್ರಮುಖರಾದ ಜೆ.ಮಹಮ್ಮದ್ ಅಲಿ, ಕುಡತಿನಿ ಮೌಲಾಲಿ, ವೈ.ಬಾಷಾಸಾಬ್, ಅಬ್ಬಣ್ಣ, ಎಸ್.ಪೀರವಲಿ, ಮುರ್ತುಜಾ, ಮೌಲಾಲಿ, ರಂಜಾನ್ ಸಾಬ್, ಮಾಬುಸಾಬ್, ಎಸ್.ಕಾಸೀಂ ಸಾಬ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net