ಶ್ರೀ ಹರಿವಾಯು ಕೃಪಾಕ್ಕೆ ಪೇಜಾವರ ಶ್ರೀ ಭೇಟಿ

pejavara shree
ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಂಗಳವಾರ ಭೇಟಿ ನೀಡಿದರು.
Published on

ಹೆಬ್ರಿ: ಅಜೆಕಾರು ಗುಡ್ಡೆಅಂಗಡಿ ಶ್ರೀ ಹರಿವಾಯು ಕೃಪಾಕ್ಕೆ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಂಗಳವಾರ ಭೇಟಿ ನೀಡಿದರು.

ಬಳಿಕ ಆರ್ಶೀವಚನ ನೀಡಿದ ಅವರು, ಮಾಧ್ವ ಸಿದ್ಧಾಂತ ಅಳವಡಿಸಿ, ಪ್ರಚಾರಪಡಿಸುವುದರ ಜತೆಗೆ, ತನ್ನ ಸಂಪನ್ಮೂಲಗಳಲ್ಲಿ ಒಂದಿಷ್ಟು ಪಾಲನ್ನು ಸಮಾಜದ ಏಳಿಗೆಗೆ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಹಕರಿಸುತ್ತಿರುವ ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ವಿದ್ವಾನ್ ರಾಘವೇಂದ್ರ ಭಟ್ಟರು ಸಮಾಜಕ್ಕೆ ಮಾದರಿ ಎಂದರು.

ಅಜೆಕಾರು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಸದಸ್ಯರಿಂದ ಭಜನೆ ಮತ್ತು ಅನ್ನಸಂತರ್ಪಣೆ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net