

ಉಡುಪಿ: ಅಯೋಧ್ಯಾ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಸನ್ಯಾಸ ಸ್ವೀಕಾರದ 33ನೇ ವರ್ಧಂತಿ ಉತ್ಸವ ಪೇಜಾವರ ಮಠದಲ್ಲಿ ಮಂಗಳವಾರ ನೆರವೇರಿತು.
ಈ ಸಂದರ್ಭ ಶ್ರೀಗಳಿಗೆ ಮಠದ ಅಭಿಮಾನಿಗಳು, ಶಿಷ್ಯರು ಪುಷ್ಪಾಭಿಷೇಕ ನೆರವೇರಿಸಿ ಗುರುವಂದನೆ ಸಲ್ಲಿಸಿದರು. ಬೆಳಗ್ಗೆ ವಿದ್ವಾನ್ ದೇವೇಶ ಭಟ್ಟರ ನೇತೃತ್ವದಲ್ಲಿ ವಿರಜಾ ಹೋಮ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.
ಮಠದ ದಿವಾನರಾದ ಎಂ. ರಘುರಾಮಾಚಾರ್ಯ, ವಿದ್ವಾನ್ ವಿಶ್ವೇಶ ಭಟ್, ರಾಮಚಂದ್ರ ಭಟ್, ಸುಬ್ರಹ್ಮಣ್ಯ ಭಟ್, ಇಂದು ಶೇಖರ ಹೆಗ್ಡೆ, ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣ ಭಟ್, ವಿಷ್ಣುಮೂರ್ತಿ ಆಚಾರ್ಯ, ಎಸ್.ವಿ. ಭಟ್ ಮೊದಲಾದವರು ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ವಂದಿಸಿದರು.