ಜಮೀನಿನಲ್ಲಿ ಪಾದುಕೆ, ಇತರ ವಸ್ತುಗಳು ಪತ್ತೆ

05arsph4ep
ಹೊನ್ನಶೆಟ್ಟಿಹಳ್ಳಿ ಹೊರವಲಯದ ಜಮೀನಿನಲ್ಲಿ ಪತ್ತೆಯಾದ ಸಾಧುಗಳು ಬಳಸುವ ಪಾದುಕೆ, ಇತರ ಪರಿಕರಗಳು.
Published on

ಅರಸೀಕೆರೆ: ತಾಲೂಕಿನ ಹೊನ್ನಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಹಾದು ಹೋಗಿರುವ ಚತುಷ್ಪಥ ಹೆದ್ದಾರಿಗೆ ಹೊಂದಿಕೊಂಡಂತೆ ಅನತಿ ದೂರದಲ್ಲಿರುವ ಜಮೀನಿನಲ್ಲಿ ಸ್ವಾಮೀಜಿಗಳು, ಸಾಧುಗಳು ಬಳಸುವ ಪಾದುಕೆ, ಕವಲು ಸೇರಿದಂತೆ ಇತರ ಪರಿಕರಗಳು ಗುರುವಾರ ಪತ್ತೆಯಾಗಿವೆ.

ಅಚ್ಚರಿಯೆಂಬಂತೆ ಖಾಲಿ ಜಾಗದಲ್ಲಿ ಅಳತೆ ಮಾಡಿದಂತೆ ಅಲ್ಲಲ್ಲಿ ವಸ್ತುಗಳು ಕಂಡುಬಂದಿವೆ. ಜತೆಗೆ ಆಗತಾನೆ ತಯಾರಿಸಿದಂತಿರುವ ಸಾಧುಗಳ ಪರಿಕರಗಳನ್ನು ನೋಡಲು ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಹೋಗುತ್ತಿದ್ದಾರೆ. ವಿಚಿತ್ರದ ಬಗ್ಗೆ ತಮ್ಮಲ್ಲಿಯೇ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕುರಿತಂತೆ ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಗ್ರಾಮಸ್ಥರಿಗೆ ಅವುಗಳನ್ನು ಸ್ಥಳಾಂತರಿಸದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜನಜಂಗುಳಿ ಹೆಚ್ಚಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಯಾರು ಹೀಗೆ ಮಾಡಿದ್ದಾರೆ? ಇದರಿಂದ ಲಾಭವೇನು? ಎಂಬ ಬಿಸಿ ಬಿಸಿ ಚರ್ಚೆ ಜೋರಾಗಿ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net