ಶರವೂರು ದೇವಳದಲ್ಲಿ ಗರ್ಭಗೃಹದ ಪಾದುಕಾನ್ಯಾಸ

paduka
ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ನೂತನ ಗರ್ಭಗೃಹದ ಪಾದುಕಾನ್ಯಾಸ ಕಾರ್ಯಕ್ರಮ ನಡೆಯಿತು.
Published on

ಕಡಬ: ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಇಷ್ಟಿಕಾ ಸ್ಥಾಪನ ಗರ್ಭಪಾತ್ರನ್ಯಾಸ ಮತ್ತು ನೂತನ ಗರ್ಭಗೃಹದ ಪಾದಕಾನ್ಯಾಸ ಬುಧವಾರ ಮತ್ತು ಗುರುವಾರ ನಡೆಯಿತು. ಆ.21ರಂದು ಸಾಯಂಕಾಲ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ವಾಸ್ತುಹೋಮ, ರಕ್ಷೋಘ್ನ ಹೋಮ, ವಾಸ್ತು ಬಲಿ ನೂತನ ಗರ್ಭಗೃಹಕ್ಕೆ ಇಷ್ಟಿಕಾಸನ ಗರ್ಭಪಾತ್ರನ್ಯಾಸ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಗುರುವಾರ ಬೆಳಗ್ಗೆ ನೂತನ ಗರ್ಭ ಗೃಹದ ಪಾದುಕಾನ್ಯಾಸ, ಬ್ರಹ್ಮರಥ ಕೆತ್ತನೆಯ ಮೂಹೂರ್ತ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆ ಸೇರಿದಂತೆ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರುಗಳು, ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net