ಕಾರಿನಡಿ ಬಿದ್ದು ಯುವಕ ಸಾವು

19102020 Kudligi Accident
Published on

ಪಡುಬಿದ್ರಿ: ಕಾರ್ಕಳ ಕುಂಟಾಡಿಯತ್ತ ತೆರಳುತ್ತಿದ್ದ ಸ್ಕೂಟಿ ಸ್ಕಿಡ್ ಆಗಿ ರಸ್ತೆಗೆ ಬಿದ್ದ ಸವಾರ ಕುಂಟಲ್ಪಾಡಿಯ ಅಶ್ವಿಲ್ ಸ್ಯಾಮ್ಸನ್ ಸೋನ್ಸ್ (22) ಅವರಿಗೆ ಕಾರು ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟ ಘಟನೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಕಂಚಿನಡ್ಕ ಬಳಿ ಗುರುವಾರ ನಡೆದಿದೆ. ಸ್ಕೂಟಿ ಸ್ಕಿಡ್ ಆಗಿ ಹೆಲ್ಮೆಟ್ ಕಳಚಿ ಬಲಕ್ಕೆ ಸೆಳೆದುಹೋದ ಪರಿಣಾಮ ಕಾರ್ಕಳದಿಂದ ಪಡುಬಿದ್ರಿಯತ್ತ ಬರುತ್ತಿದ್ದ ಕಾರು ಸಾಮ್ಸನ್‌ಗೆ ಡಿಕ್ಕಿಯಾಗಿ ತಲೆಗೆ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net