ಪದ್ಮಾವತಿದೇವಿ ಜಾತ್ರಾ ಮಹೋತ್ಸವ ಇಂದಿನಿಂದ

Padmavati Devi Jatra Mahotsava from today
ಪದ್ಮಾವತಿ ದೇವಿ
Published on

ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಜಗನ್ಮಾತೆ ಮಹಾಯಕ್ಷಿ ಪದ್ಮಾವತಿದೇವಿಯ ಜಾತ್ರಾ ಮಹೋತ್ಸವ ಮಾ. 30ರಿಂದ ಏಪ್ರಿಲ್ 2ರವರೆಗೆ ನಡೆಯಲಿದೆ.

30ರಂದು ಬೆಳಗ್ಗೆ ಪ್ರಾರ್ಥನೆ, ನಾಗದೇವರ ಪೀಠ ಶುದ್ಧಿ ಹವನ, ಬಿಂಬ ವಿನ್ಯಾಸ, ನಾಗದೇವರ ವಿಗ್ರಹ ಪ್ರತಿಷ್ಠಾಪನೆ, ಕಲಾರೂಪಣ, ನಾಗಶಾಂತಿ, ಅಷ್ಠಕುಲ ನಾಗರಪೂಜೆ, 31ರಂದು ಮಂಗಲವಾದ್ಯ ಘೋಷ, ಪ್ರಾರ್ಥನೆ, ಧ್ವಜಾರೋಹಣ, ತೋರಣ ಮುಹೂರ್ತ, ಶುದ್ಧಿ ಹವನ, ಶ್ರೀಬಲಿ, ಕಂಕಣ ಬಂಧನ, ಭಗವಾನ್ ಶ್ರೀ1008 ಪಾರ್ಶ್ವನಾಥ ತೀರ್ಥಂಕರರಿಗೆ ನವಕಳಸಾಭಿಷೇಕ, ಪಂಚಾಮೃತ ಅಭಿಷೇಕ, ಕಲಿಕುಂಡ ಆರಾಧನಾ ಪೂಜೆ, ಪದ್ಮಾವತಿ ಅಮ್ಮನವರಿಗೆ ನಿತ್ಯವಿಧಿ ಸಹಿತ ಪಂಚಾಮೃತ ಅಭಿಷೇಕ, ಅಲಂಕಾರ, ನೈವೇದ್ಯ ಪೂಜೆ, ಆರತಿ, ಪದ್ಮಾವತಿ ಆರಾಧನೆ, ನೂತನ ಭೋಜನಶಾಲೆ ವಾಸ್ತು ವಿಧಾನ, ವಾಸ್ತು ರಕ್ಷೋಘ್ನ ಹವನ, ನವಗ್ರಹ ಶಾಂತಿಪೂಜೆ, ರಾತ್ರಿ ಮಂಗಳಾರತಿ, ಮುತ್ತೈದೆಯರಿಗೆ ಉಡಿ ತುಂಬುವ ಅರಿಷಿಣ ಕುಂಕುಮ ಜರುಗಲಿದೆ.

ಏ. 1ರಂದು ಬೆಳಗ್ಗೆ 8ಕ್ಕೆ ಮುದ್ದೇಬಿಹಾಳ ಪಟ್ಟಣದ ಚಾಮಪ್ಪ ಹೂಲಿ ಟ್ರಸ್ಟಿನ ದಿಗಂಬರ ಜೈನ ಬಸದಿಯಿಂದ ಪದ್ಮಾವತಿ ಅಮ್ಮನವರ ದೇವಸ್ಥಾನದವರೆಗೆ ಕಳಸ, ಪಲ್ಲಕ್ಕಿ, ಮಹಾರಥದ ಹಗ್ಗದ ಮೆರವಣಿಗೆ, ನಿತ್ಯ ವಿಧಿ ಸಹಿತ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಪದ್ಮಾವತಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಪೂಜೆ, ರಥ ಶುದ್ಧಿ ಹವನ, ರಥದ ಕಳಸ ಸ್ಥಾಪನೆ, ಚಡಾವು ಸವಾಲು, ಉತ್ಸವ ಮೂರ್ತಿಗಳ ರಥಾರೋಹಣ, ಮಧ್ಯಾಹ್ನ 2ಕ್ಕೆ ಧರ್ಮಸಭೆ, ಸನ್ಮಾನ, ಸಂಜೆ 5.30ಕ್ಕೆ ಮಹಾರಥೋತ್ಸವ, 6.30ಕ್ಕೆ ಪದ್ಮಾವತಿ ಅಮ್ಮನವರಿಗೆ ಅಷ್ಟಾವಧಾನ ಪೂಜೆ, ಚಾಮರಸೇವೆ, ಶೋಡಷೋಪಚಾರ ಪೂಜೆ, ಮಹಾಮಂಗಳಾರತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಏ. 2ರಂದು ನಿತ್ಯವಿಧಿ, ಭಗವಾನ್ ಪಾರ್ಶ್ವನಾಥ ಸ್ವಾಮಿಗೆ, ಪದ್ಮಾವತಿ ಯಕ್ಷಿ, ಪದ್ಮಾವತಿ ದೇವಿಗೆ ಪಂಚಾಮೃತ ಅಭಿಷೇಕ ಪೂಜೆ, ಕುಂಕುಮೋತ್ಸವ, ಮಹಾಮಂಗಳಾರತಿ, ಧ್ವಜ ಅವರೋಹಣ ಮತ್ತು ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ ಎಂದು ಮುದ್ನಾಳ ಪಾರ್ಶ್ವನಾಥ ತೀರ್ಥಂಕರ, ಪದ್ಮಾವತಿ ಟ್ರಸ್ಟ್ ಕಮಿಟಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net