

ಧಾರವಾಡ: ಧಾರವಾಡ ಸಂಗೀತದ ಅವಿಚ್ಛಿನ್ನ ಪರಂಪರೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಪದ್ಮಶ್ರೀ ಡಾ. ಎಂ. ವೆಂಕಟೇಶಕುಮಾರ ಅವರು ಜು. ೧ರಂದು ೭೦ ವಸಂತ ಪೂರೈಸಲಿದ್ದಾರೆ. ಅವರಿಗೆ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಹಾಗೂ ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ನಿಂದ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕ್ಷಮತಾ ಸಂಸ್ಥೆಯ ಗೋವಿಂದ ಜೋಶಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೪ ಗಂಟೆಗೆ ಇಲ್ಲಿನ ಸೃಜನಾ ರಂಗಮAದಿರದಲ್ಲಿ ಕಾರ್ಯಕ್ರಮ ಜರುಗುವುದು. ಪಂ. ವೆಂಕಟೇಶಕುಮಾರ ಜೀವನಾಧರಿತ `ನಾದದ ನವನೀತ' ಸಾಕ್ಷ÷್ಯಚಿತ್ರ ಪ್ರದರ್ಶನಗೊಳ್ಳಲಿದೆ. ಸಂಜೆ ೫ಕ್ಕೆ ಯುವಪ್ರತಿಭೆ ಅಯ್ಯಪ್ಪಯ್ಯ ಹಗಲಗಿಮಠ ಅವರಿಂದ ಗಾನಸುಧೆ ಹರಿದುಬರಲಿದೆ. ೬ ಗಂಟೆಗೆ ಯುವ ಗಾಯಕಿ ಐಶ್ವರ್ಯಾ ದೇಸಾಯಿ ಅವರಿಂದ ಗಾಯನವಿದೆ. ಸಂಜೆ ೬.೩೦ಕ್ಕೆ ಪಂ. ವೆಂಕಟೇಶಕುಮಾರ ಅವರೊಂದಿಗೆ ಸಂವಾದ ಕಾರ್ಯಕ್ರಮವಿದೆ. ಚಲನಚಿತ್ರ ನಿರ್ದೇಶಕರಾದ ಗಿರೀಶ ಕಾಸರವಳ್ಳಿ, ಪಿ. ಶೇಷಾದ್ರಿ, ಬಾನ್ಸುರಿ ವಾದಕ ಪಂ. ಪ್ರವೀಣ ಗೋಡಖಿಂಡಿ ಹಾಗೂ ಆಗ್ರಾ ಘರಾಣೆಯ ಗಾನವಿದುಷಿ ಹುಬ್ಬಳ್ಳಿಯ ರೇಖಾ ಹೆಗಡೆ ಪಾಲ್ಗೊಳ್ಳುವರು ಎಂದರು.
ಸAಜೆ ೭.೩೦ಕ್ಕೆ ಪಂ. ವೆಂಕಟೇಶಕುಮಾರ ಅವರಿಗೆ ಸನ್ಮಾನ ಸಮಾರಂಭ ಜರುಗುವುದು. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಇತರರು ಪಾಲ್ಗೊಳ್ಳುವರು ಎಂದರು.
ಸಮೀರ ಜೋಶಿ, ರಮೇಶ ನಾಡಿಗೇರ, ಸುದ್ದಿಗೋಷ್ಠಿಯಲ್ಲಿದ್ದರು.