ಸ್ಥಾಯಿ ಸಮಿತಿಗೆ ಪದ್ಮನಾಭ್​ಪ್ರಸಾದ್​ ಅಧ್ಯಕ್ಷ

10 04 2025_BGR RURAL_PAGE_2
ನೆಲಮಂಗಲ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪದ್ಮನಾಭ್​ಪ್ರಸಾದ್​ ಅವರನ್ನು ಮುಂಖಡರು ಸನ್ಮಾನಿಸಿದರು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​ ಮತ್ತಿತರರು ಇದ್ದರು.
Published on

ನೆಲಮಂಗಲ : ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ಪದ್ಮನಾಭ್​ಪ್ರಸಾದ್​ ಅವಿರೋಧವಾಗಿ ಆಯ್ಕೆಯಾದರು.

ನಗರಸಭಾ ಕಾರ್ಯಾಲಯದಲ್ಲಿ ಬುಧವಾರ ಅಧ್ಯಕ್ಷ ಎನ್​.ಗಣೇಶ್​ ಅಧ್ಯಕ್ಷತೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರು ಎರಡನೇ ಅವಧಿಗೆ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಿದರು. ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಪದ್ಮನಾಭ್​ ಪ್ರಸಾದ್​ ಮಾತನಾಡಿ, ನಗರಸಭೆಯಿಂದ ನಾಗರಿಕರಿಗೆ ಸಮರ್ಪಕ ಮೂಲಸೌಕರ್ಯ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಸೇವಾವಧಿಯಲ್ಲಿ ಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಪಡೆದು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಪದ್ಮನಾಭ್​ ಪ್ರಸಾದ್​ ಅವರನ್ನು ಅಧ್ಯಕ್ಷ, ಉಪಾಧ್ಯಕ್ಷ, ಸಮಿತಿ ಸದಸ್ಯರು, ನಗರಸಭೆ ಅಧಿಕಾರಿಗಳು ಹಾಗೂ ಮುಖಂಡರು ಸನ್ಮಾನಿಸಿದರು.

ಸದಸ್ಯರಾದ ನರಸಿಂಹಮೂರ್ತಿ, ಚೇತನ್​, ಲೋಲಾಗಂಗಾಧರ್​, ಭಾಗ್ಯಾ ನರಸಿಂಹಮೂರ್ತಿ, ಪುರುಷೋತ್ತಮ್​, ಪೌರಾಯುಕ್ತ ಮನುಕುಮಾರ್​, ಮುಖಂಡ ಕೆ.ಕೃಷ್ಣಪ್ಪ, ಮುನಿಯಪ್ಪ, ನರಸಿಂಹಮೂರ್ತಿ, ನಾಗರಾಜು, ವಸಂತ್​, ನಾರಾಯಣ್​ ರಾವ್​, ಮೋಹನ್​ ಕುಮಾರ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net