ಸಾಧಕರ ಹಾದಿಯಲ್ಲಿ ಸಾಗಿದರೆ ಯಶಸ್ಸು: ಮಂಜಮ್ಮ ಜೋಗತಿ

19KKNR-03
Published on

ಕೊಪ್ಪಳ: ಸಾಧಕರ ಹಿಂದೆ ಸ್ಫೂರ್ತಿದಾಯಕ ಕಥೆ ಇರುತ್ತದೆ, ಅದನ್ನು ಅರ್ಥೈಸಿಕೊಂಡು ಅವರ ಹಾದಿಯಲ್ಲಿ ಸಾಗಿದರೆ ಎಲ್ಲರೂ ಯಶಸ್ವಿ ವ್ಯಕ್ತಿಯಾಗಬಹುದು ಎಂದು ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ, ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.


ಹಳೇಬಂಡಿಹರ್ಲಾಪುರ ಗ್ರಾಮದಲ್ಲಿ ಶಿವರಾತ್ರಿ ನಿಮಿತ್ತ ಶನಿವಾರ ಏರ್ಪಡಿಸಿದ್ದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತೃತೀಯ ಲಿಂಗಿಯಾಗಿ ಗುರುತಿಸಿಕೊಂಡ ನಾನು ಕೌಟುಂಬಿಕ ಬಹಿಷ್ಕಾರದ ನಡುವೆಯೂ ಬದುಕು ಕಟ್ಟಿಕೊಂಡೆ. ಚಿಕ್ಕ ವಯಸ್ಸಿನಿಂದ ಕಲಾಸೇವೆ ಮಾಡುತ್ತಿದ್ದು ಇಂದಿಗೂ ನಿಂತಿಲ್ಲ. ಜಾನಪದ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ, ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ, ಜಾನಪದ ಆಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಈಗಿರುವ ಸರ್ಕಾರ ನಮಗೂ ಒಂದು ಪರ್ಸೆಂಟ್ ಮೀಸಲಾತಿ ಕೊಟ್ಟಿದೆ ಎಂದರು.


ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್, ಸದಸ್ಯರಾದ ಹನುಮಂತಪ್ಪ ಕರಡಿ, ಅಂಜಿ ಮೇಸ್ತ್ರಿ, ಪ್ರಮುಖರಾದ ಭೀಮರಾಯ ಪತ್ತೆಪುರ, ಬಾಷುಸಾಬ್ ಗೊರೇಬಾಳ, ನಿಂಗಜ್ಜ ಹ್ಯಾಟಿ, ವೀರೇಶ ಮುದಗಲ್, ಹುಸೇನ್ ಬಾಷಾ ಖುರೇಷಿ, ಕನಕಪ್ಪ ಆಗೋಲಿ, ಫಕೀರಸಾಬ್, ನಾಗರಾಜ್ ಬಳ್ಳಾರಿ, ಧರ್ಮಣ್ಣ ಹಟ್ಟಿ, ಮಂಜು ತೋಟಗೇರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net