ಟಿಎಪಿಸಿಎಂಎಸ್‌ಗೆ ಪದ್ಮಾ ಅಧ್ಯಕ್ಷೆ

11 TKE 1,1
Published on

ತರೀಕೆರೆ: ತಾಲೂಕು ಪ್ರಾಥಮಿಕ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಪದ್ಮಾ ಅವಿರೋಧ ಆಯ್ಕೆಯಾದರು.
ಬುಧವಾರ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಇಲಾಖೆ ಸಹಾಯಕ ನಿಬಂಧಕ ವೆಂಕಟೇಶ ಮೂರ್ತಿ ಪದ್ಮಾ ಅವರ ಅವಿರೋಧ ಆಯ್ಕೆ ಘೋಷಿಸಿದರು.
ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ನೂತನ ಉಪಾಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿ, ಟಿಎಪಿಸಿಎಂಎಸ್‌ನ ಹಳೇ ಗೋದಾಮು ನವೀಕರಿಸಿ ಅಲ್ಲಿ ಹಾರ್ಡ್‌ವೇರ್ ಮತ್ತು ರಸಗೊಬ್ಬರ ಮಾರಾಟ ಮಳಿಗೆ ಸ್ಥಾಪಿಸುತ್ತಿರುವುದು ಸಂಘದ ಪ್ರಗತಿಗೆ ಪೂರಕವಾಗಿದೆ. ಲಾಭ ಮಾತ್ರವಲ್ಲದೇ ರೈತರಿಗೆ ಅಗತ್ಯ ಸಲಕರಣೆ ಮಾರಾಟ ಮಾಡಲು ಯೋಜನೆ ರೂಪಿಸಬೇಕು ಎಂದರು.
ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಬಿ.ಸುಧಾಕರ್, ನಿರ್ದೇಶಕರಾದ ಎಂ.ನರೇಂದ್ರ, ಎಸ್.ಬಿ.ಆನಂದಪ್ಪ, ಜಿ.ಎಸ್.ವಸಂತ್‌ಕುಮಾರ್, ಪಿ.ಶಶಿಕುಮಾರ್, ಕೆ.ಆರ್.ಜಯಣ್ಣ, ತಿಮ್ಮೇಶ್‌ಬಾಬು, ಎಲ್.ಎಸ್.ಶಿವಯೋಗಿ, ಪ್ರೇಮ ಎಚ್.ಟಿ, ಸಿಇಒ ನಿತೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net