ಪಾದೂರು ಗುರುರಾಜ ಭಟ್ ಪ್ರಶಸ್ತಿಗೆ ಪುರಾತತ್ವಜ್ಞ ಕೆ.ಕೆ. ಮಹಮ್ಮದ್ ಆಯ್ಕೆ

kk mahammad
Published on

ಉಡುಪಿ: ಹಿರಿಯ ಇತಿಹಾಸ ತಜ್ಞ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಪದ್ಮಶ್ರೀ ಪುರಸ್ಕೃತ ಪುರಾತತ್ವಜ್ಞ ಕೆ.ಕೆ. ಮಹಮ್ಮದ್ ಆಯ್ಕೆಯಾಗಿದ್ದಾರೆ. ಈ ಬಾರಿ ಪ್ರಶಸ್ತಿ ಮೊತ್ತವನ್ನು 50 ಸಾವಿರದಿಂದ ರೂ. 1 ಲಕ್ಷಕ್ಕೆ ಏರಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪಾದೂರು ಶ್ರೀಪತಿ ತಂತ್ರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.28ರಂದು ಬೆಳಗ್ಗೆ 9.30ಕ್ಕೆ ವಿದ್ಯೋದಯ ಶಾಲಾ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಶಾಸಕ ಕೆ. ರಘುಪತಿ ಭಟ್ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಯೋಧ್ಯೆ, ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ ದೇವಸ್ಥಾನಗಳ ಉತ್ಖನನ ಬಗ್ಗೆ ಕೆ.ಕೆ. ಮಹಮ್ಮದ್ ಉಪನ್ಯಾಸ ನೀಡಲಿದ್ದಾರೆ.

12.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ನಿವೃತ್ತ ಉಪಕುಲಪತಿ ಕೆ. ಭೈರಪ್ಪ ಮುಖ್ಯಅತಿಥಿಗಳಾಗಿರುವರು ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ವಿಷ್ಣು ದೇವಾಲಯವನ್ನು ಕೆಡವಿ ಬಾಬ್ರಿ ಮಸೀದಿ ನಿರ್ಮಿಸಲಾಗಿತ್ತು ಎಂಬುದಾಗಿ ಮಹಮ್ಮದ್ ಅವರ ನೇತೃತ್ವದ ತಂಡ ನೀಡಿದ ವರದಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ರಾಮಮಂದಿರದ ಬಗ್ಗೆ ನೀಡಿದ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಕೋಶಾಧಿಕಾರಿ ಪರಶುರಾಮ ಭಟ್, ಪಿ. ಮಹೇಶ್ ಭಟ್, ವೆಂಕಟೇಶ ಭಟ್, ರಘುಪತಿ ರಾವ್, ಪೆರಂಪಳ್ಳಿ ವಾಸುದೇವ ಭಟ್, ಎ.ಪಿ. ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net