

ನಾಪೋಕ್ಲು: ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಭತ್ತದ ನಾಟಿ ಭರದಿಂದ ಸಾಗುತ್ತಿದೆ. ಕೆಲವು ದಿನಗಳ ಬಿರುಸಿನ ಮಳೆಯಿಂದಾಗಿ ನಾಟಿ ಕಾರ್ಯ ಸ್ಥಗಿತಗೊಂಡಿತ್ತು. ವಿವಿಧೆಡೆ ಅಗೆ ತೆಗೆಯುವ ಮತ್ತು ಉಳುಮೆ ಮಾಡುವ ಕಾರ್ಯ ಸಾಂಗವಾಗಿ ನಡೆಯುತ್ತಿದೆ. ಕೃಷಿ ಕಾರ್ಯಕ್ಕೆ ಕಾರ್ಮಿಕರ ಕೊರತೆಯ ನಡುವೆಯೂ ಸ್ಥಳೀಯ ಕೆಲಸಗಾರರನ್ನೇ ಒಗ್ಗೂಡಿಸಿಕೊಂಡು, ಪರ ಊರಿನಿಂದ ಬಂದ ಕಾರ್ಮಿಕರನ್ನು ಸೇರಿಸಿಕೊಂಡು ರೈತರು ನಾಟಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೂಲಿಕಾರ್ಮಿಕರ ಅಭಾವದಿಂದಾಗಿ ಬಹುತೇಕ ಕೃಷಿಕರು ಇತ್ತೀಚಿನ ವರ್ಷಗಳಲ್ಲಿ ನಾಟಿ ಮಾಡುವ ಕಾರ್ಯವನ್ನೇ ಕೈ ಬಿಟ್ಟಿದ್ದಾರೆ. ಇನ್ನೊಂದೆಡೆ ಕಾಡು ಪ್ರಾಣಿಗಳು ಭತ್ತದ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡುತ್ತವೆ ಎಂಬ ಭಯವೂ ಕಾಡುತ್ತಿದೆ. ಭತ್ತದ ಕೃಷಿಯಿಂದ ಹೇಳಿಕೊಳ್ಳುವಷ್ಟು ಲಾಭವೇನಿಲ್ಲ ಎಂಬ ಹಿನ್ನೆಲೆಯಲ್ಲಿ ಬಹುತೇಕ ರೈತರು ಕೃಷಿ ಚಟುವಟಿಕೆಗೇ ವಿದಾಯ ಹೇಳುವ ಸ್ಥಿತಿ ಈಗ ಎದುರಾಗಿ