

ಕಂಪ್ಲಿ: ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಭತ್ತ, ಜೋಳ, ರಾಗಿ ಖರೀದಿಗಾಗಿ ನೋಂದಣಿ ಪ್ರಕ್ರಿಯೆ ಮಂಗಳವಾರ ಆರಂಭಗೊಂಡಿತು.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕ್ವಿಂಟಾಲ್‌ಗೆ ಭತ್ತ-ಸಾಮಾನ್ಯ 2300 ರೂ., ಭತ್ತ ಗ್ರೇಡ್-ಎ 2320 ರೂ., ಬಿಳಿ ಜೋಳ-ಹೈಬ್ರಿಡ್ 3371 ರೂ., ಬಿಳಿ ಜೋಳ ಮಾಲ್ದಂಡಿ 3,421 ರೂ., ರಾಗಿ 4290 ರೂ. ನಿಗದಿಪಡಿಸಲಾಗಿದೆ.
ರೈತರು ಪಹಣಿ, ಆಧಾರ್, ಎಫ್‌ಐಡಿ ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಬೇಕು ಎಂದು ತಹಸೀಲ್ದಾರ್ ಎಸ್.ಶಿವರಾಜ ತಿಳಿಸಿದರು. ಆಹಾರ ನಿರೀಕ್ಷಕ ಬಿ.ವಿರೂಪಾಕ್ಷ ಗೌಡ, ನೋಂದಣಿದಾರ ಪ್ರಶಾಂತ, ರೈತರಾದ ಎಚ್.ವೀರೇಶಪ್ಪ, ಈಶ್ವರರೆಡ್ಡಿ, ರಂಗಾರೆಡ್ಡಿ, ವಿಜಯ, ಉಮೇಶ್, ಖಾದರ್‌ಬಾಷಾ ಇತರರಿದ್ದರು.