ಭತ್ತ ಖರೀದಿಸಿ ಹಣ ನೀಡದ ಮಧ್ಯವರ್ತಿಗಳು: ಕ್ರಮಕ್ಕೆ ಸಿರಗುಪ್ಪ ತಾಲೂಕು ಬಾಗೇವಾಡಿ ಬಸವಣ್ಣ ಕ್ಯಾಂಪ್ ರೈತರ ಒತ್ತಾಯ

Siraguppa Basavanna Camp Farmers Appeal
ಸಿರಗುಪ್ಪ ತಾಲೂಕು ಕಚೇರಿ ಶಿರಸ್ತೇದಾರ್ ಬಾಬುಗೆ ಬಾಗೇವಾಡಿ ಬಸವಣ್ಣ ಕ್ಯಾಂಪ್‌ನ ರೈತರು ಶುಕ್ರವಾರ ಮನವಿ ಸಲ್ಲಿಸಿದರು.
Published on

ಸಿರಗುಪ್ಪ: ಭತ್ತ ಖರೀದಿ ಮಾಡಿ ಹಣ ನೀಡದ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕಿನ ಬಾಗೇವಾಡಿ ಬಸವಣ್ಣ ಕ್ಯಾಂಪ್‌ನ ರೈತರು ಶುಕ್ರವಾರ ತಾಲೂಕು ಕಚೇರಿ ಶಿರಸ್ತೇದಾರ್ ಬಾಬುಗೆ ಮನವಿ ಸಲ್ಲಿಸಿದರು.

ರೈತ ಪಿ.ಶಿವಾಜಿ ಮಾತನಾಡಿ, ಕಳೆದ ಏಪ್ರಿಲ್, ಮೇನಲ್ಲಿ ಭತ್ತವನ್ನು ಮಧ್ಯವರ್ತಿಗಳಾದ ಬೀರಪ್ಪ ಮತ್ತು ಸತ್ಯರೆಡ್ಡಿ ಖರೀದಿಸಿ ಒಂದು ವಾರದಲ್ಲಿ ಹಣ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಹಣ ನೀಡದೆ ಮೋಸ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದರೆ ಪ್ರಕರಣ ದಾಖಲಿಸಿಕೊಳ್ಳುವುದು ಬಿಟ್ಟು ನಮ್ಮ ಮೇಲೆಯೇ ರೇಗಾಡುತ್ತಿದ್ದಾರೆ. ಅಲ್ಲದೆ ಪೊಲೀಸರೂ ಸ್ಪಂದಿಸುತ್ತಿಲ್ಲ. ಆದ್ದರಿಂದ ತಹಸೀಲ್ದಾರರು ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ರೈತರಾದ ಪಿ.ಗೋವಿಂದ, ಶ್ರೀಹರಿಬಾಬು, ನಾರಾಯಣ, ಹನುಮಂತಪ್ಪ, ಸತ್ಯನಾರಾಯಣ, ಪಕ್ಕೀರಪ್ಪ, ಚನ್ನನಗೌಡ, ಬಸವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net