

ಮಂಡ್ಯ: ರಾಜ್ಯಸರ್ಕಾರದ ಆದೇಶದಂತೆ ಜ.16ರಿಂದ ಜಿಲ್ಲೆಯಲ್ಲಿ ಕನಿಷ್ಟ ಬೆಂಬಲ ಯೋಜನೆಯಡಿ ರೈತರಿಂದ ಭತ್ತ ಖರೀದಿ ಮಾಡಿಕೊಳ್ಳಲಾಗುತ್ತಿದೆ.
ಕೆ.ಆರ್.ಪೇಟೆ ಎಪಿಎಂಸಿ ಆವರಣ, ಕಿಕ್ಕೇರಿ ಎಪಿಎಂಸಿ ಆವರಣ, ಮದ್ದೂರು ಎಪಿಎಂಸಿ ಆವರಣ, ಕೊಪ್ಪ ಸಂತೆ ಮೈದಾನ, ಮಳವಳ್ಳಿ ಎಪಿಎಂಸಿ ಆವರಣ, ಯಲಿಯೂರು ರಾಜ್ಯ ಉಗ್ರಾಣ ನಿಗಮದ ಆವರಣ, ಉಮ್ಮಡಹಳ್ಳಿ ರಾಜ್ಯ ಉಗ್ರಾಣ ನಿಗಮದ ಆವರಣ, ನಾಗಮಂಗಲ ಎಪಿಎಂಸಿ ಆವರಣ, ಪಾಂಡವಪುರ ಎಪಿಎಂಸಿ ಆವರಣ ಹಾಗೂ ಶ್ರೀರಂಗಪಟ್ಟಣ ಟಿಎಪಿಸಿಎಂಎಸ್ ಗೋದಾಮು ಆವರಣದಲ್ಲಿನ ಕೇಂದ್ರದಲ್ಲಿ ಖರೀದಿ ಮಾಡಲಾಗುವುದು. ನೋಂದಣಿ ಪ್ರಕ್ರಿಯೆ ಜ.31ರವರೆಗೆ ಚಾಲ್ತಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.