ಭತ್ತದ ಗದ್ದೆಗಳು ಜಲಾವೃತ

30 nrp 1.
ಎನ್.ಆರ್.ಪುರ ತಾಲೂಕು ಆಡುವಳ್ಳಿ ಗ್ರಾಪಂನ ಗಣಪತಿ ಕಟ್ಟೆ ಬಸ್‌ನಿಲ್ದಾಣ ಸಂಪೂರ್ಣ ಕುಸಿದಿರುವುದು.
Published on

ಎನ್.ಆರ್.ಪುರ: ತಾಲೂಕಿನಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರದ ಸಂಜೆಯವರೆಗೂ ಸುರಿದ ಮಳೆಗೆ ಭತ್ತದ ಗದ್ದೆ ಮೇಲೆ ಹಳ್ಳದಂತೆ ನೀರು ಹರಿಯುತ್ತಿದೆ.
ಬಾಳೆ ಗ್ರಾಪಂನ ಅರಳಿಕೊಪ್ಪ ಗ್ರಾಮದ ಅಯ್ಯಪ್ಪ , ಗುಬ್ಬಿಗಾ ಗ್ರಾಮದ ಲತಾ, ಪ್ರಜ್ವಲ್, ಪ್ರಣಾಮ್‌ಎಂಬುವರ ಭತ್ತದ ಗದ್ದೆ ಮೇಲೆ ಹಳ್ಳದ ನೀರು ಹರಿದು ಭತ್ತದ ಸಸಿಗಳ ಮೇಲೆ ಮಣ್ಣು ಬಂದು ಕುಳಿತಿದೆ. ಕೊಳಲೆ ಗ್ರಾಮದ ಕಿಚ್ಚಿಬ್ಬು ವ್ಯಾಪ್ತಿಯಲ್ಲಿ ನಿಡಗೋಡು ಹಳ್ಳ ಉಕ್ಕಿ ಹರಿದು ಪಕ್ಕದ ಗದ್ದೆ, ತೋಟ ಜಲಾವೃತವಾಗಿದೆ. ಸ್ಥಳಕ್ಕೆ ಸಹಾಯಕ ಕೃಷಿ ನಿರ್ದೇಶಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಲವು ಗ್ರಾಮಗಳಲ್ಲಿ ಮನೆಗಳ ಗೋಡೆ ಕುಸಿತವಾಗಿದೆ. ರಾವೂರು ಗ್ರಾಮದ ರೇಖಾ, ಬೈರಾಪುರದ ನಿಖಿತಾ, ಈಶಮ್ಮ , ವಗ್ಗಡೆ ಗ್ರಾಮದ ಶೇಷಗೌಡ, ಕೊನೋಡಿ ಗ್ರಾಮದ ಚಂದ್ರಶೇಖರ ಎಂಬುವರ ಮನೆ ಗೋಡೆಕುಸಿದೆ. ಕಡಹಿನಬೈಲು ಗ್ರಾಮದ ಮೇರಿ ಎಂಬುವರ ದನದ ಕೊಟ್ಟಿಗೆ ಉರುಳಿ ಬಿದ್ದಿದೆ. ಅತಿಯಾದ ಮಳೆಯಿಂದಾಗಿ ಕೊಳೆ ರೋಗದ ಭೀತಿ ಎದುರಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net