ಕಾಡಾನೆ ಹಾವಳಿಗೆ ಭತ್ತ ನಾಶ

Paddy destroyed due to forest pest
Published on

ಕುಶಾಲನಗರ:

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಕೃಷಿಕರು ಬೆಳೆದ ಭತ್ತದ ಫಸಲು ಸಂಪೂರ್ಣವಾಗಿ ಕಾಡಾನೆಗಳ ಪಾಲಾಗುತ್ತಿದೆ.

ಆನೆಕಾಡು ಅರಣ್ಯದ ಅಂಚಿನಲ್ಲಿರುವ ಗ್ರಾಮದಲ್ಲಿ ಅರಣ್ಯದಿಂದ ಬರುವ ಕಾಡಾನೆಗಳ ಹಿಂಡು ತಂಡೋಪತAಡವಾಗಿ ದಾಳಿ ಮಾಡಿ ಬೆಳೆಯನ್ನೆಲ್ಲಾ ತುಳಿದು ತಿಂದು ಹಾನಿ ಮಾಡುತ್ತಿವೆ. ಅರಣ್ಯ ಇಲಾಖೆಗೆ ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಇಲಾಖೆಯಿಂದ ಬಿಡಿಗಾಸು ಪರಿಹಾರದ ಹಣ ಬರುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅರಣ್ಯದ ಸುತ್ತ ಕಾಡಾನೆಗಳು ಸುಳಿಯದಂತೆ ಸೋಲಾರ್ ತಂತಿ ಬೇಲಿ ಅಥವಾ ರೈಲು ಕಂಬಿಯ ಬೇಲಿಯನ್ನೂ ಅಳವಡಿಸುತ್ತಿಲ್ಲ ಎಂದಿರುವ ಸ್ಥಳೀಯರು, ತಾವು ಬೆಳೆದ ಕಾಫಿ, ಬಾಳೆ, ಅಡಕೆ, ತೆಂಗು ಹಾಗೂ ಭತ್ತದ ಫಸಲು ಕಾಡಾನೆಗಳ ಪಾಲಾಗುತ್ತಿದೆ ಎಂದು ದೂರಿಕೊಂಡಿದ್ದಾರೆ.

ಅರಣ್ಯದ ಒತ್ತಿನಲ್ಲಿ ಇರುವ ಚಿಕ್ಕಬೆಟ್ಟಗೇರಿ ಗ್ರಾಮಕ್ಕೆ ಅರಣ್ಯಾಧಿಕಾರಿಗಳು ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಂಟಿಯಾಗಿ ನಷ್ಟದ ವಿವರ ಕೈಗೊಳ್ಳಬೇಕು. ರೈತರಿಗೆ ಪ್ರತೀ ವರ್ಷವೂ ಆಗುತ್ತಿರುವ ಬೆಳೆ ಹಾನಿಯ ಪರಿಹಾರದ ಹಣವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net