ಭತ್ತದ ಬೆಳೆಗೆ ಕೀಟಗಳ ಹಾವಳಿ

paddy
Published on

ಮಡಿಕೇರಿ:

ಜಿಲ್ಲೆಯಲ್ಲಿ ಹಲವು ಸವಾಲುಗಳ ಮಧ್ಯೆ ನಡೆಯುತ್ತಿರುವ ಭತ್ತದ ಕೃಷಿಗೆ ಈಗ ಕೀಟಗಳ ಹಾವಳಿ ಶುರುವಾಗಿದೆ. ನಾಟಿ ಮಾಡಿ ಕೇವಲ 20-25 ದಿನಗಳಾಗಿರುವ ಪೈರಿಗೆ ಎಲೆ ಸುರುಳಿ ಹುಳು ಕಂಟಕವಾಗಿ ಪರಿಣಮಿಸಿದೆ. ಜಿಲ್ಲೆಯ ಐದೂ ತಾಲೂಕುಗಳಲ್ಲಿ ಕೂಡ ಈ ಸಮಸ್ಯೆ ಬಿಗಡಾಯಿಸುತ್ತಿದ್ದು, ಹತೋಟಿಗೆ ಕ್ರಮ ತೆಗೆದುಕೊಳ್ಳದಿದ್ದರೆ ಇಳುವರಿ ಮೇಲೆ ಪರಿಣಾಮ ಬೀರುವ ಆತಂಕ ಕಾಣಿಸಿಕೊಂಡಿದೆ.

ದಕ್ಷಿಣದ ಕಾಶ್ಮೀರ ಎಂದೇ ಗುರುತಿಸಲಾಗುವ ಕೊಡಗು ಜನಸಂಖ್ಯೆ ಆಧಾರದಲ್ಲಿ ರಾಜ್ಯದಲ್ಲಿ ಚಿಕ್ಕ ಜಿಲ್ಲೆಯಾದರೂ ಭೌಗೋಳಿಕ ವಿಸ್ತೀರ್ಣದಲ್ಲಿ ಆರನೇ ಸಣ್ಣ ಜಿಲ್ಲೆಯಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕೊಡಗು ನೆಲೆ ನಿಂತಿದ್ದು ವರ್ಷದ ಬಹುತೇಕ ಸಮಯ ಮಳೆಯಿಂದ ಕೂಡಿರುತ್ತದೆ. ಹಾಗಾಗಿ ಇಲ್ಲಿ ನಿತ್ಯ ಹರಿದ್ವರ್ಣದ ಕಾಡುಗಳನ್ನು ಕಾಣಬಹುದು. ಪರಿಸರವೂ ಸದಾ ಹಸಿರಾಗಿ ಇರುತ್ತದೆ. ಹೆಚ್ಚಿನ ಭೂ ಭಾಗ ಬೆಟ್ಟ, ಗುಡ್ಡಗಳಿಂದ ಕೂಡಿದ್ದು, ಅಲ್ಲಲ್ಲಿ ಝರಿ, ತೊರೆ ಹಾಗೂ ನದಿಗಳನ್ನು ಕಾಣಬಹುದು. ಇಲ್ಲಿ ವಾತಾವರಣ ಭತ್ತ ಬೇಸಾಯಕ್ಕೆ ಪೂರಕ ಆಗಿರುವುದರಿಂದ ಜಿಲ್ಲೆಯ ಬಹು ಮುಖ್ಯ ಬೆಳೆ ಭತ್ತವೇ ಆಗಿದೆ. ಅನ್ನ ಇಲ್ಲಿನ ಜನರ ಪ್ರಧಾನ ಆಹಾರವಾಗಿದೆ.

ಅಧಿಕ ಮಳೆ ಬೀಳುವ ಈ ಪ್ರದೇಶÀದಲ್ಲಿ ಭತ್ತವನ್ನು ಪರಂಪರಗತವಾಗಿ ಸಾಂಪ್ರದಾಯಿಕವಾಗಿ ಬೆಳೆಸಿಕೊಂಡು ಬರಲಾಗುತ್ತಿತ್ತು. ದಶಕಗಳ ಹಿಂದೆ ಕೊಡಗನ್ನು ಭತ್ತದ ಕಣಜ, ಅನ್ನದ ಬಟ್ಟಲು ಎಂದೆಲ್ಲಾ ಕರೆಯಲಾಗುತ್ತಿತ್ತು. ಆದರೆ ದಿನ ಕಳೆದಂತೆ ಹಲವಾರು ಕಾರಣಗಳಿಂದ ಜಿಲ್ಲೆಯಲ್ಲಿ ಭತ್ತದ ಬೆಳೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಭತ್ತ ಬೆಳೆಯುವ ಪ್ರದೇಶ ಗಣನೀಯವಾಗಿ ಕ್ಷೀಣಿಸುತ್ತಿದೆ. ಕೊಡಗಿನಲ್ಲಿ ಪ್ರಮುಖ ಹಬ್ಬವಾದ ಹುತ್ತರಿ ಆಚರಣೆಗೆ ಬೇಕಾಗಿರುವ ಕದಿರನ್ನು ಸಹ ಭತ್ತ ಬೆಳೆದಿರುವ ಬೇರೆ ರೈತರಿಂದ ತಂದು ಆಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಇತ್ತೀಚಿನ ದಿನಗಳಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಆಸಕ್ತಿ ತೋರಿಸುತ್ತಿದ್ದಾರೆ. ಗದ್ದೆಗಳು ಕಾಫಿ, ಅಡಿಕೆ ತೋಟಗಳಾಗುತ್ತಿದೆ. ಶುಂಠಿ ಬೆಳೆಯೂ ಭತ್ತದ ಗದ್ದೆಗಳನ್ನು ಆಕ್ರಮಿಸಿಕೊಳ್ಳುತ್ತಿದೆ. ಭತ್ತ ಬೆಳೆಯುತ್ತಿದ್ದ ಜಾಗಗಳು ಲೇ ಔಟ್‌ಗಳಾಗಿ ಪರಿವರ್ತನೆ ಹೊಂದುತ್ತಿವೆ. ಹಾಗಾಗಿ ಭತ್ತ ಕೃಷಿ ಮಾಡುವ ಪ್ರದೇಶ ಕಡಿಮೆ ಆಗುತ್ತಿದೆ. ಇದರಿಂದಾಗಿ ಭತ್ತದ ಇಳುವರಿಯಲ್ಲೂ ಇಳಿಮುಖವಾಗುತ್ತಿರುವುದು ಕಂಡು ಬರುತ್ತಿದೆ. ಈ ಎಲ್ಲಾ ಸವಾಲುಗಳ ಮಧ್ಯೆಯೂ ಪರಂಪರೆ ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ಬಹುತೇಕ ಕೃಷಿಕರು ಭತ್ತದ ಕೃಷಿಯನ್ನು ಮುಂದುವರಿಸಿಕೊAಡು ಬರುತ್ತಿದ್ದಾರೆ.

ಜಿಲ್ಲೆಯಾದ್ಯಂತ ಈ ವರ್ಷ ಉತ್ತಮ ವiಳೆಯಾಗುತ್ತಿರುವುದರಿಂದ ಭತ್ತದÀ ಕೃಷಿ ಚಟುವಟಿಕೆ ಈಗಾಗಲೇ ಚುರುಕಾಗಿ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಭತ್ತದ ನಾಟಿ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಮತ್ತೆ ಕೆ¯ವು ಕಡೆ ನಾಟಿ ಕಾರ್ಯ ನಡೆಯುತ್ತಿರುವುದನ್ನೂ ಕಾಣಬಹುದಾಗಿದೆ. ನೇರ ಬಿತ್ತನೆ ಅಥವಾ ಡ್ರಮ್ ಸೀಡರ್‌ಗಳ ಮೂಲಕ ಬಿತ್ತನೆ ಕಾರ್ಯವೂ ಅಲ್ಲಲ್ಲಿ ಮುಂದುವರಿದಿದೆ. ಈ ಮಧ್ಯೆ ಭತ್ತದ ನಾಟಿ ಮಾಡಿ 20 ರಿಂದ 25 ದಿನಗಳಾಗಿರುವ ಗದ್ದೆಗಳಲ್ಲಿ ಎಲೆ ಸುರುಳಿ ಹುಳುವಿನ ಹಾವಳಿ ಕಾಣಿಸಿಕೊಂಡಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಕುಶಾಲನಗರ ಹಾಗೂ ಸೋಮವಾರಪೇಟೆ ಹೀಗೆ ಐದೂ ತಾಲೂಕುಗಳಲ್ಲೂ ಎಲೆ ಸುರುಳಿ ಹುಳುವಿನ ಹಾವಳಿ ಇರುವುದನ್ನು ಕಾಣಬಹುದಾಗಿದೆ. ಎಲೆ ಸುರುಳಿ ಹುಳುವಿನ ಬಾಧೆ ಸಸಿ ಮಡಿಯಲ್ಲಿ ಮತ್ತು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದಿದ್ದರೆ, ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಪೈರು ಬೆಳ್ಳಗೆ ಬಿಳುಚಿಕೊಂಡAತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ.

ಆರಂಭಿಕ ಹಂತದಲ್ಲೇ ಎಲೆ ಸುರುಳಿ ಹುಳುವಿನ ಹಾವಳಿಯನ್ನು ತಡೆಗಟ್ಟಬೇಕಾಗುತ್ತದೆ. ಇಲ್ಲದಿದ್ದೆ ಸಂಪೂರ್ಣ ಗದ್ದೆಯನ್ನೇ ಆವರಿಸಿಕೊಂಡು ರೈತನಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಸಂಭವಿಸಲು ಕಾರಣವಾಗುತ್ತದೆ. ಹಾಗಾಗಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಈ ಬಾಧೆಯನ್ನು ಹತೋಟಿಗೆ ತರಲು ಹಲವು ಸಲಹೆಗಳನ್ನು ನೀಡಿದ್ದಾರೆ. ಇದನ್ನು ಚಾಚೂ ತಪ್ಪದೆ ಪಾಲಿಸಿದಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಮೋಡ ಕವಿದ ವಾತಾವರಣ, ತುಂತುರು ಮಳೆ ಹನಿ, ಬಿಟ್ಟು ಬಿಟ್ಟು ಬರುವ ಬಿಸಿಲು ಮತ್ತು ಮಳೆ ಎಲೆ ಸುರುಳಿ ಹುಳುವಿನ ಬಾಧೆ ತೀವ್ರವಾಗಿ ಹರಡಲು ಪೂರಕವಾಗಿದೆ. ಈ ಹುಳುವಿನ ಪತಂಗ ತಿಳಿ ಹಳದಿ ಬಣ್ಣ ಹೊಂದಿದ್ದು ರೆಕ್ಕೆಗಳ ಮೇಲೆ ತೆಳುವಾದ ಕಪುö್ಪ ಅಡ್ಡ ಗೆರೆಗಳಿರುತ್ತವೆ. ಹೆಣ್ಣು ಪತಂಗ ಸುಮಾರು 300 ಮೊಟ್ಟೆಗಳನ್ನು ಎಲೆಯ ಮೇಲೆ ಮಧ್ಯದ ನರಕ್ಕೆ ಸಮಾನಾಂತರ ರೇಖೆಯಲ್ಲಿ ಇಡುತ್ತದೆ. 4 ರಿಂದ 7 ದಿನಗಳಲ್ಲಿ ಮೊಟ್ಟೆಯಿಂದ ಮರಿಗಳು ಹೊರಬಂದು 15 ರಿಂದ 27 ದಿನಗಳವರೆಗೆ ಎಲೆಯನ್ನು ಕೆರೆದು ತಿನ್ನುತ್ತಾ ಬೆಳೆದು ಕೋಶಾವಸ್ಥೆಯನ್ನು ಸೇರುತ್ತವೆ. ಆರರಿಂದ ಎಂಟು ದಿನಗಳವರೆಗೆ ಕೋಶಾವಸ್ಥೆಯಲ್ಲಿದ್ದು ನಂತರ ಪ್ರೌಢ ಕೀಟ ಹೊರ ಬರುತ್ತದೆ.

ಎಲೆ ಸುರುಳಿ ಹುಳುವಿನ ಹಾವಳಿಯ ಲಕ್ಷಣಗಳು ನಾಟಿ ಮಾಡಿದ ಗದ್ದೆಗಳಲ್ಲಿ ಕಂಡು ಬಂದರೆ ಇದರ ಹತೋಟಿಗೆ ಮೊದಲನೆಯ ಕ್ರಮವಾಗಿ ಗದ್ದೆಯ ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವಚ್ಛಗೊಳಿಸಬೇಕು. ಶಿಫಾರಸ್ಸು ಮಾಡಿರುವಷ್ಟು ಮಾತ್ರ ಸಾರಜನಕ ಗೊಬ್ಬರವನ್ನು ಕೊಡಬೇಕು. ಕೀಟವಿರುವ ಸೂಚನೆಯನ್ನು ನೋಡಿಕೊಂಡು ಇಂಡಾಕ್ಸಿಕಾರ್ಬ್ 0.5 ಮಿ.ಲೀ. ಅಥವಾ ¥s಼ÀÅ್ಲಬೆಂಡಮೈಡ್ 0.4 ಮಿ.ಲಿ ಇವುಗಳಲ್ಲಿ ಯಾವುದಾದರೂ ಒಂದು ಕೀಟನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪರಣೆ ಮಾಡುವಾಗ ಕೀಟನಾಶಕಕ್ಕೆ ಅಂಟು ದ್ರಾವಣ ಸೇರಿಸಿ ಸಿಂಪಡಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ಹೆಚ್ಚಿನ ಮಾಹಿತಿಗಾಗಿ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದ ತಜ್ಞರನ್ನು ಸಂಪರ್ಕಿಸಬಹುದಾಗಿದೆ.

ಕೊಡಗಿನ ಐದೂ ತಾಲೂಕುಗಳಲ್ಲಿ ಭತ್ತದ ನಾಟಿ ಮಾಡಿ 20 ರಿಂದ 25 ದಿನಗಳಾಗಿರುವ ಗದ್ದೆಗಳಲ್ಲಿ ಎಲೆ ಸುರುಳಿ ಹುಳುವಿನ ಹಾವಳಿ ಕಾಣಿಸಿಕೊಂಡಿದೆ. ಈ ಹುಳುಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತದೆ. ಇದರಿಂದ ಪೈರು ಬೆಳ್ಳಗೆ ಬಿಳುಚಿಕೊಂಡAತೆ ಕಾಣಿಸುತ್ತದೆ. ಬಾಧೆ ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬರದೆ ನಷ್ಟವುಂಟಾಗುತ್ತದೆ. ಈ ಬಾಧೆಯನ್ನು ಹತೋಟಿಗೆ ತರಲು ನೀಡಿರುವ ಸಲಹೆಗಳನ್ನು ಪಾಲಿಸುವ ಮೂಲಕ ಭತ್ತದ ಫಸಲನ್ನು ಕಾಪಾಡಿಕೊಳ್ಳಬಹುದಾಗಿದೆ.

ಡಾ. ವೀರೇಂದ್ರ ಕುಮಾರ್, ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net