ಹುಬ್ಬಳ್ಳಿಯಿಂದ ತಿರುಪತಿಗೆ ಪಾದಯಾತ್ರೆ

Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ ಕ್ರಾಸ್ ನಿವಾಸಿಗಳಾದ ಮಂಜುನಾಥ ಕಿರೇಸೂರ, ನಾರಾಯಣ ಕಿರೇಸೂರ ಅವರು ತಿರುಪತಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಡಿಸೆಂಬರ್ 2ರಂದು ಬೆಳಗ್ಗೆ 6ಕ್ಕೆ ಉಣಕಲ್ ಕ್ರಾಸ್ ವೆಂಕಟಾದ್ರಿ ಹೈಟ್ಸ್ ಕಿರೇಸೂರ ಕಾಂಪ್ಲೆಕ್ಸ್ನಿಂದ ಪಾದಯಾತ್ರೆ ಪ್ರಾರಂಭವಾಗಲಿದೆ. ಕೆಲವು ಜನರು ಹುಬ್ಬಳ್ಳಿ ಚನ್ನಮ್ಮ ಸರ್ಕಲ್ವರೆಗೆ ಹಾಗೂ ನಗರ ಪ್ರದೇಶ ದಾಟುವವರೆಗೂ ಪಾದಯಾತ್ರೆಯಲ್ಲಿ ಜೊತೆಗೂಡಿ ವೆಂಕಟೇಶ್ವರನ ಸೇವೆ ಗೈಯಲಿದ್ದಾರೆ.

ಉಣಕಲ್ಲ, ಕೇಶ್ವಾಪುರ, ಧಾರವಾಡ ಮತ್ತು ನವಲಗುಂದ ತಾಲೂಕಿನ ಚಿಲಕವಾಡ, ಶಿಶುವಿನಹಳ್ಳಿ ವಿವಿಧೆಡೆಯ ಜನರು ಇವರೊಂದಿಗೆ ಪಾದಯಾತ್ರೆಯಲ್ಲಿ ಕೂಡಿಕೊಳ್ಳಲಿದ್ದಾರೆ.

ಇದು ಇವರ ಮೂರನೇ ವರ್ಷದ ಪಾದಯಾತ್ರೆಯಾಗಿದ್ದು, ಸುಮಾರು 630 ಕಿ.ಮೀ. ದೂರ ಪ್ರಯಾಣಕ್ಕೆ 20 ದಿನಗಳವರೆಗೆ ಪಾದಯಾತ್ರೆ ನಡೆಸಲಿದ್ದಾರೆ. ಡಿಸೆಂಬರ್ 23ರಂದು ತಿರುಪತಿ ತಲುಪಿ ವೈಕುಂಠ ಏಕಾದಶಿಯ ದಿನದಂದು ದೇವರ ದರ್ಶನ ಪಡೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net