ಇಂಡಿ ಪ್ರತ್ಯೇಕ ಜಿಲ್ಲೆಗಾಗಿ ಪಾದಯಾತ್ರೆ

Padayatra for separate district of Indi
ಇಂಡಿ ಪಟ್ಟಣದ ತಾಲೂಕು ಆಡಳಿತ ಭವನದ ಮುಂದೆ ವಿವಿಧ ಊರು ಜನರು ಪ್ರತಿಭಟನೆ ನಡೆಸಿದರು. ಕೈಲಾಸಯ್ಯ ಹಿರೇಮಠ, ದೇವೇಂದ್ರ ಬರಡೋಲ, ಚನ್ನಪ್ಪ ಶ್ರೀಗಿರಿ, ಮಂಜುನಾಥ ಕಾಮಗೊಂಡ ಇತರರಿದ್ದರು.
Published on


ಇಂಡಿ: ಇಂಡಿಯನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂಬ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ತಾಲೂಕಿನ ಮಿರಗಿ ಹಾಗೂ ಸಾಲೋಟಗಿ ಗ್ರಾಮದ ಜನರು ತಮ್ಮ ಗ್ರಾಮದಿಂದ ಪಾದಯಾತ್ರೆ ಮೂಲಕ ಇಂಡಿ ಪಟ್ಟಣಕ್ಕೆ ಮಂಗಳವಾರ ಆಗಮಿಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರಿಗೆ ಮನವಿ ಸಲ್ಲಿಸಿದರು.

ಕೈಲಾಸಯ್ಯ ಹಿರೇಮಠ ಮಾತನಾಡಿ, ಈಗಾಗಲೇ ಸರ್ಕಾರ ಇಂಡಿ ಜಿಲ್ಲೆ ಮಾಡುವ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಅದಲ್ಲದೆ ದೇವರಹಿಪ್ಪರಗಿ, ಸಿಂದಗಿ, ಆಲಮೇಲ, ಇಂಡಿ ಮತ್ತು ಚಡಚಣ ಭಾಗದ ಪ್ರಮುಖ ಶ್ರೀಗಳು, ಮಠಾಧೀಶರು, ಗಣ್ಯರು ಹಾಗೂ ರಾಜಕೀಯ ಧುರೀಣರ ಅಭಿಪ್ರಾಯ ಸಂಗ್ರಹಿಸಲು ಕೇಳಿಕೊಂಡಿದ್ದು ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಮಾನ್ಯ ಮುಖ್ಯಮಂತ್ರಿ ಅವರು ಇಂಡಿ ತಾಲೂಕು ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು.

ದೇವೇಂದ್ರ ಬರಡೋಲ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಯೋಗ್ಯವಾದ ಭೌಗೋಳಿಕ ಪ್ರದೇಶ ಮತ್ತು ಸರ್ಕಾರಿ ಕಚೇರಿಗಳನ್ನು ಹೊಂದಿರುವ ಇಂಡಿಯನ್ನು ಜಿಲ್ಲೆಯಾಗಿಸಬೇಕು. ಇಲ್ಲದಿದ್ದರೆ ತಾಲೂಕಿನ ಎಲ್ಲ ಭಾಗದ ರೈತರು ಸಹಕಾರ ಕೋರಿ ಎಲ್ಲರೂ ಒಕ್ಕಟ್ಟಿನಿಂದ ಹೋರಾಟ ಮಾಡುವುದಾಗಿ ತಿಳಿಸಿದರು.
ಚನ್ನಪ್ಪ ಶ್ರೀಗಿರಿ ಮಾತನಾಡಿ, ಸರ್ಕಾರ ನಮ್ಮ ಮನವಿ ಪರಿಗಣಿಸಿ ಇಂಡಿ ಜಿಲ್ಲಾ ಕೇಂದ್ರ ಘೋಷಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಹೋರಾಟ ಸಮಿತಿಯ ಮಂಜುನಾಥ ಕಾಮಗೊಂಡ, ಕಾರ್ಯದರ್ಶಿ ಸಂತೋಷ ಪಾಪಣ್ಣನವರ ನಿವೃತ್ತ ಪ್ರಾಚಾರ್ಯ ಎ.ಎಸ್.ಗಾಣಿಗೇರ, ಶ್ರೀಶೈಲ ತೋನಶ್ಯಾಳ, ವಿಠ್ಠಲ ಬೊಳೆಗಾಂವ, ವಿಠ್ಠಲ ಸಾಳುಂಕೆ, ಶಕೀಲ ಮುಲ್ಲಾ, ಶ್ರೀಶೈಲ ಮಠಪತಿ, ಶರಣು ಬೊರಟಗಿ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಶಿವಯೋಗಪ್ಪ ಜೋತಗೊಂಡ, ಜೀತಪ್ಪ ಕಲ್ಯಾಣಿ, ಅಪ್ಪು ಅಡಗಲ್ಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net