ಸಮಸ್ಯೆ ಆಲಿಸಲು ಮಧುಚಂದನ್ ಪಾದಯಾತ್ರೆ: ಜನರಿಂದ ಸಿಕ್ಕಿತ್ತು ಉತ್ತಮ ಸ್ಪಂದನೆ

Madhuchandan)
Published on

ಮಂಡ್ಯ: ಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಲು ಮಂಡ್ಯ ವಿಧಾನಸಭಾ ಕ್ಷೇತ್ರದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಎಸ್.ಸಿ.ಮಧುಚಂದನ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಗರದ ದೇವೇಗೌಡನದೊಡ್ಡಿಯ ಮಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

ಮನೆ ಮನೆ ಮಧುಚಂದನ್-ಮಾದರಿ ಮಂಡ್ಯದ ಕನಸನ್ನು ಹೊತ್ತು ಎನ್ನುವ ಘೋಷಣೆಯೊಂದಿಗೆ ಹೊರಟ ಪಾದಯಾತ್ರೆ ಷುಗರ್‌ಟೌನ್, ಗಿರಿಜಾ ಸ್ಲಂ, ರಾಜಕುಮಾರ್ ಬಡಾವಣೆಯಲ್ಲಿರುವ ಕಿರೇಮಡಿ ಸ್ವಸಹಾಯ ಸಂಘಗಳ ಮಹಿಳೆಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಅಂತೆಯೇ ಮನೆಗಳಿಗೆ ಭೇಟಿ ನೀಡಿದ ವೇಳೆ ಜನರು ಮೂಲಸೌಕರ್ಯಗಳಿಲ್ಲದೆ ಆಗುತ್ತಿರುವ ತೊಂದರೆ ಹಾಗೂ ಆಗಬೇಕಿರುವ ಅಭಿವೃದ್ಧಿ ಕೆಲಸದ ಬಗ್ಗೆ ಹೇಳಿದರು.

ಮಧುಚಂದನ್ ಮಾತನಾಡಿ, ಹಲವು ವರ್ಷದಿಂದ ಅಭಿವೃದ್ಧಿಯಾಗದ ಪರಿಣಾಮ ಇಡೀ ಮಂಡ್ಯವೇ ದೊಡ್ಡ ಹಳ್ಳಿಯಾಗಿದೆ. ಇಲ್ಲಿ ಸಮಸ್ಯೆಗಳು ನೂರಾರು ಇದ್ದರೂ, ಇದುವರೆಗೂ ಗೆದ್ದವರು ಕ್ಷೇತ್ರದ ಹಿತಾಸಕ್ತಿ ದೃಷ್ಟಿಯಿಂದ ಕೆಲಸ ಮಾಡಿಲ್ಲ. ಇದಕ್ಕಾಗಿಯೇ ರಾಜಕೀಯ ಕ್ಷೇತ್ರದಲ್ಲಿ ಏನಾದರೂ ಬದಲಾವಣೆ ತರಬೇಕಿದೆ. ಪಾರದರ್ಶಕ ಆಡಳಿತ ನೀಡಬೇಕೆಂಬುವ ದೃಷ್ಟಿಯಿಂದ ಸಾಪ್ಟ್‌ವೇರ್ ಉದ್ಯಮವನ್ನು ತೊರೆದು ರಾಜಕಾರಣಕ್ಕೆ ಧುಮುಕಿದ್ದೇನೆ ಎಂದರು.

ರಾಜ್ಯ ರೈತ ಸಂಘದ ಖಜಾಂಚಿ ಆಗಿರುವ ತಗ್ಗಳ್ಳಿ ಪ್ರಸನ್ನ ಮಾತನಾಡಿ, ವಿಧಾನಸಭೆಯಲ್ಲಿ ರೈತರ ದುಗುಡ ದುಮ್ಮಾನಗಳ ಬಗ್ಗೆ ದನಿ ಎತ್ತಲು ರೈತ ಪರವಾದ ಮನಸ್ಸುಳ್ಳವರ ಅವಶ್ಯಕತೆ ಇದೆ ಎಂದರು.

ರೈತ ಸಂಘದ ಜಿಲ್ಲಾ ಖಜಾಂಚಿ ಶೆಟ್ಟಳ್ಳಿ ರವಿ, ಬೆಳ್ಳುಂಡಗೆರೆ ಕಾಂತ, ಪಣಕನಹಳ್ಳಿ ರಮೇಶ್, ಬಸರಾಳು ಯುವ ಘಟಕದ ಅಧ್ಯಕ್ಷ ಅನಿಲ್, ಮಂಜೇಶ್, ರಾಘು, ಶಶಿಕಲಾ, ಮಂಜುಳಾ, ಪುಷ್ಪಾ, ಸ್ವರೂಪ, ಅನ್ನಪೂರ್ಣ, ಅನುಷಾ, ಶಿಲ್ಪಾ, ಸುಶೀಲಾ, ಪಲ್ಲವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net