ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾಗಿದ್ದಕ್ಕೆ ಪಾದಯಾತ್ರೆ

11Kush06
ಕುಶಾಲನಗರದ ಆಟೋ ಚಾಲಕ ಪಿ.ಮಂಜು ಬೆಳ್ಳುಳ್ಳಿ ಯಡಿಯೂರಪ್ಪ ಅವರ ಪುತ್ರ ವಿಜೇಂದ್ರ ಅವರನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ನೇಮಿಸಿರುವ ಕಾರಣ ಅವರ ಅಭಿಮಾನಿ ಮಂಜು ಬೆಳ್ಳುಳ್ಳಿ ಕುಶಾಲನಗರದಿಂದ ನಂಜನಗೂಡು ವರಗೆ ಪಾದಯಾತ್ರೆ ಆರಂಭಿಸಿದರು. ಮನು, ಕೃಷ್ಣಪ್ಪ, ಭರತ್, ಶಶಿಕುಮಾರ್, ಪ್ರಶಾಂತ್ ಇತರರು ಇದ್ದರು.
Published on

ಕುಶಾಲನಗರ: ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಹಿನ್ನೆಲೆಯಲ್ಲಿ ಆಟೋ ಚಾಲಕ ಪಿ.ಮಂಜು ಬೆಳ್ಳುಳ್ಳಿ ಕುಶಾಲನಗರದ ಆಂಜನೇಯಸ್ವಾಮಿ ದೇವಸ್ಥಾನದಿಂದ ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದವರೆಗೆ ಶನಿವಾರ ಪಾದಯಾತ್ರೆ ಕೈಗೊಂಡಿದ್ದಾರೆ.

ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಬೇಕು ಎಂದು ಹರಕೆ ಹೊತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಮಂಜು ಬೆಳ್ಳುಳ್ಳಿ ಶನಿವಾರ ಬೆಳ್ಳಿಗ್ಗೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಿದರು. ಕುಶಾಲನಗರ ಬಿಜೆಪಿ ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ಕೆ.ಜಿ.ಮನು, ಶಶಿಕುಮಾರ್, ಪ್ರಶಾಂತ್, ಸುಮನ್, ಅವಿನಾಶ್, ವಕೀಲ ಭರತ್ ಮತ್ತಿತರರು ಮಂಜು ಪಾದಯಾತ್ರೆಗೆ ಶುಭ ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net