

ಮಂಗಳೂರು: ಪದವಿನಂಗಡಿ ಪೆರ್ಲಗುರಿ ಶ್ರೀ ಪ್ರಸನ್ನ ಮಹಾಗಣಪತಿ ದೇವಸ್ಥಾನದಲ್ಲಿ ಬಾಲ ಸಂಸ್ಕಾರ ತರಗತಿಯ ವತಿಯಿಂದ ಪ್ರಥಮ ವರ್ಷದ ಶಾರದಾ ಪೂಜೆ ಶನಿವಾರ ಜರುಗಿತು. ಪುರೋಹಿತರಾದ ಕೃಷ್ಣ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.
ಬಾಲ ಸಂಸ್ಕಾರ ತರಗತಿಗೆ ದೇವಸ್ಥಾನದಲ್ಲಿ ಸ್ಥಳಾವಕಾಶವನ್ನು ಮಾಡಿಕೊಟ್ಟ ಪುರೋಹಿತ ಶ್ರೀಧರ ಭಟ್ ಅವರನ್ನು ಸನ್ಮಾನಿಸಲಾಯಿತು. ಗುರುಗಳಾದ ಚೇತನ ಕೃಷ್ಣ ಭಟ್ ಅವರ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಶ್ಲೋಕ ಭಜನೆ ಮತ್ತು ಭಗವದ್ಗೀತಾ ಪಠಣ ಮಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.