

ಮೈಸೂರು: ಪದವಿ ಪೂರ್ವ ಚಿತ್ರ ಡಿ.30 ರಂದು ತೆರೆ ಕಾಣಲಿದೆ, ಇದು ನನ್ನ ಮೊದಲ ನಿರ್ದೇಶನದ ಚಿತ್ರವಾಗಿದೆ ಎಂದು ಹರಿಪ್ರಸಾದ್ ಜಯಣ್ಣ ಹೇಳಿದರು.
ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಲನ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡಲಾಗಿದೆ. ಕುಟುಂಬವಿಡೀ ಕುಳಿತು ನೋಡಬಹುದಾದ ಚಲನ ಚಿತ್ರ ಇದಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
1996-97ರ ಅವಧಿಯ ಕತೆಯಾಗಿರುವ ಹಿನ್ನೆಲೆಯಲ್ಲಿ ಆ ಕಾಲಘಟ್ಟಕ್ಕೆ ಪೂರಕವಾದ ಸೆಟ್, ಉಡುಗೆ, ತೊಡುಗೆ ಬಳಸಲಾಗಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಸುಮಾರು 100 ರಿಂದ 120 ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಅಂಜಲಿ ಅನೀಶ್, ಪೃಥ್ವಿ ಶಾಮನೂರು, ರಜನೀಶ್, ವಿಜಯ ಕಿರಣ್ ಹಾಗೂ ಇನ್ನಿತರರು ಇದ್ದರು.