

ತುಮಕೂರು : ಪದವಿ ಕಾಲೇಜುಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತಿದ್ದು, ಲಕ್ಷಾಂತರ ಬಡ ವಿದ್ಯಾರ್ಥಿಗಳು ಪ್ರವೇಶ ಶುಲ್ಕ ‘ತಾರತಮ್ಯ’ದಿಂದ ಕಂಗೆಟ್ಟಿದ್ದಾರೆ. ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಭರಿಸುವ ಶುಲ್ಕವನ್ನೇ ಇತರ ಹಿಂದುಳಿದ ವರ್ಗಗಳ ಹಾಗೂ ಪ್ರವರ್ಗ-1 ಬಡ ವಿದ್ಯಾರ್ಥಿಗಳು ಪಾವತಿಸಬೇಕಾಗಿದೆ.
ರಾಜ್ಯದ 28 ವಿಶ್ವವಿದ್ಯಾಲಯಗಳು ಹಾಗೂ 432 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪ್ರವೇಶ ಬಯಸಿದ್ದು, ಕಾಲೇಜಿನತ್ತ ಮುಖ ಮಾಡಲು ತವಕಿಸುತ್ತಿದ್ದಾರೆ. ಆದರೆ, ಕರೊನಾ ಸಂಕಷ್ಟದಿಂದ ಹಳಿತಪ್ಪಿದ ಬದುಕು ಸರಿಪಡಿಸಿಕೊಳ್ಳುವ ಮುನ್ನವೇ ಪಾಲಕರಿಗೆ ಮಕ್ಕಳ ಪದವಿ ಪ್ರವೇಶ ಶುಲ್ಕ ಹೊರೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶುಲ್ಕ ತಾರತಮ್ಯ: ವಿವಿ ಸಂಯೋಜಿತ ಕಾಲೇಜುಗಳಲ್ಲಿ ಓದಲು ಬಯಸುವ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳಷ್ಟೇ ಶುಲ್ಕ ಪಾವತಿಸಬೇಕಿದೆ.
2.50 ಲಕ್ಷ ರೂ., ಆದಾಯ ಮಿತಿಯೊಳಗಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅದರ ಮೇಲ್ಪಟ್ಟು 10 ಲಕ್ಷ ರೂ., ವರೆಗಿನ ಆದಾಯ ಮಿತಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಇದೆ. ಅದೇ ಪ್ರವರ್ಗ-1 ಹಾಗೂ 2ಎ, 2ಬಿ, 3ಎ, 3ಬಿ, ಇಡಬ್ಲೂೃಎಸ್ ಒಳಗೊಂಡ ಒಬಿಸಿ ಸಮುದಾಯದ ವಿದ್ಯಾರ್ಥಿಗಳು ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಭರಿಸುವಷ್ಟೇ ಶುಲ್ಕ ಪಾವತಿಸಬೇಕಿದೆ. ಇದೇ ರೀತಿ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರವೇಶ ಶುಲ್ಕದಲ್ಲೂ ತಾರತಮ್ಯ ಇದೆ. ಸಾಮಾನ್ಯ ವರ್ಗದವರು ಪಾವತಿಸುವಷ್ಟೇ ಶುಲ್ಕವನ್ನು ಒಬಿಸಿ, ಪ್ರವರ್ಗ-1 ಸಮುದಾಯದ ವಿದ್ಯಾರ್ಥಿಗಳು ಕಟ್ಟಬೇಕಿದೆ. ಈ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಮನಸ್ಸು ಮಾಡಬೇಕೆಂಬುದು ಪಾಲಕರ ಆಗ್ರಹಪೂರ್ವಕ ಒತ್ತಾಯವಾಗಿದೆ.
ವಿವಿ ಸಂಯೋಜಿತ ಕಾಲೇಜುಗಳ ಪ್ರವೇಶ ಶುಲ್ಕ ತರಗತಿ ಪ್ರವರ್ಗ-1 ಒಬಿಸಿ ಜಿಎಂ ಬಿಎ/ಬಿಎಸ್‌ಡಬ್ಲೂೃ 4225 4225 4225 ಬಿ.ಕಾಂ. 9725 9725 9725 ಬಿ.ಎಸ್ಸಿ. 6325 6325 6325 ಬಿಬಿಎಂ 8675 8675 8675 ಬಿವಿಎ 10925 10925 10925 ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರವೇಶ ಶುಲ್ಕ ತರಗತಿ ಪ್ರವರ್ಗ-1 ಒಬಿಸಿ ಜಿಎಂ ಬಿಎಸ್ಸಿ 3280 3280 3280 ಬಿಎ 3280 3280 3280 ಬಿಕಾಂ 3880 3880 3880 ಬಿಸಿಎ 6580 6580 6580 ಜನರಲ್ ಮೆರಿಟ್‌ನವರಷ್ಟೇ ಶುಲ್ಕವನ್ನು ನಮ್ಮ ಮಕ್ಕಳಿಗೂ ಭರಿಸಬೇಕಿದೆ. ಕರೊನಾ ಹೊಡೆತದಿಂದ ನಲುಗಿರುವ ಜೀವನ ಕಟ್ಟಿಕೊಳ್ಳುವಾಗಲೇ ಮಕ್ಕಳ ಶುಲ್ಕದ ಹೊರೆ ಸಹ ಬಿದ್ದಿದೆ. ಸಂಕಷ್ಟದಲ್ಲಾದರೂ ಸರ್ಕಾರ ಬಡ ವಿದ್ಯಾರ್ಥಿಗಳ ಕೈಹಿಡಿಯಲಿ. ವಿಜಯಪ್ರಕಾಶ್ ಪಾಲಕರು, ದೊಡ್ಡೇರಿ ವಿವಿ ಸಂಯೋಜಿತ ಹಾಗೂ ವಿವಿ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿನ ಪ್ರವೇಶ ಶುಲ್ಕ ತಾರತಮ್ಯದಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಕರಿಗೆ ಹೆಚ್ಚಿನ ಆರ್ಥಿಕ ಹೊರೆ ಬೀಳುತ್ತಿದೆ. ಸಾಮಾನ್ಯ ವರ್ಗದವರಷ್ಟೇ ಒಬಿಸಿ, ಪ್ರವರ್ಗ-1 ಸಮುದಾಯದವರು ಶುಲ್ಕ ಕಟ್ಟುವುದರಿಂದ ಸರ್ಕಾರ ವಿನಾಯಿತಿ ನೀಡಲಿ. ಕರೊನಾ ನೆಪವೊಡ್ಡಿ ನಿಲ್ಲಿಸಿರುವ ಸ್ಕಾಲರ್‌ಶಿಪ್‌ಗಳನ್ನು ವಿದ್ಯಾರ್ಥಿಗಳಿಗೆ ಶೀಘ್ರ ನೀಡಬೇಕು. ಅಪ್ಪುಪಾಟೀಲ್ ವಿಭಾಗ ಸಂಘಟನಾ ಕಾರ್ಯದರ್ಶಿ, ಎಬಿವಿಪಿ