ಪಾದಪೂಜೆ 13ರಂದು

DSC_3122
Published on

ಧಾರವಾಡ: ಪೇಜಾವರದ ಶ್ರೀ ವಿಶ್ವಪ್ರಸನ್ನ ತೀರ್ಥರು ಅ. 13ರಂದು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಇಲ್ಲಿನ ಪ್ರಲ್ಹಾದ ವಿದ್ಯಾರ್ಥಿ ನಿಲಯದಲ್ಲಿ ಶ್ರೀರಾಮ ವಿಠ್ಠಲ ದೇವರ ಪೂಜೆ ಮತ್ತು ಸಾಮೂಹಿಕ ಭಿಕ್ಷೆಯ ವ್ಯವಸ್ಥೆ ಮಾಡಲಾಗಿದೆ. ಪಾದಪೂಜೆಯ ವ್ಯವಸ್ಥೆ ಕೂಡ ಇರಲಿದೆ. ಪಕ್ಷಮಾಸ ಇರುವುದರಿಂದ ಭಕ್ತರಿಗೆ ಪಕ್ಷದ ಮತ್ತು ಕಾಲಶ್ರಾದ್ಧದ ಅನುಕೂಲ ಕಲ್ಪಿಸಲಾಗುವುದು. ಆಸಕ್ತ ಭಕ್ತರು ಯತಿ ಭಿಕ್ಷೆ, ಪಾದಪೂಜೆ ಮತ್ತು ಪಕ್ಷ ಮಾಡಲು ಆಸಕ್ತ ಭಕ್ತರು ಪಾಲ್ಗೊಳ್ಳಬೇಕು ಎಂದು ಕಾರ್ಯದರ್ಶಿ ಕೆ.ಆರ್. ದೇಶಪಾಂಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net