ಪದಾಳ ಬ್ರಹ್ಮಕಲಶ ಆಮಂತ್ರಣ ಬಿಡುಗಡೆ

Upp_Invitation
Published on

ಉಪ್ಪಿನಂಗಡಿ: ಇಲ್ಲಿನ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಡಿ.18ರಿಂದ 23ರ ವರೆಗೆ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ನಿವೃತ್ತ ಸೇನಾಧಿಕಾರಿ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಿ.ಚಂದಪ್ಪ ಮೂಲ್ಯ ಇತ್ತೀಚೆಗೆ ಬಿಡುಗಡೆಗೊಳಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಅಧ್ಯಕ್ಷ ಮಣಿಕ್ಕಳ ಜಗದೀಶ ರಾವ್, ಪ್ರಮುಖರಾದ ನಡುಸಾರು ಉದಯಶಂಕರ ಭಟ್, ಎನ್.ಜಯಗೋವಿಂದ ಶರ್ವಾ ಪದಾಳ, ಪ್ರತಾಪ್ ಯು. ಪೆರಿಯಡ್ಕ, ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಗೌಡ ನೆಡ್ಚಿಲು, ಸುರೇಶ್ ಗೌಂಡತ್ತಿಗೆ, ರಾಮಣ್ಣ ಶೆಟ್ಟಿ ಬೊಳ್ಳಾವು, ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್ ಕೂವೆಚ್ಚಾರು, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿ ಕಿಂಡೋವು, ಲೋಕೇಶ ಪೂಜಾರಿ ಬೆತ್ತೋಡಿ, ವಿಜಯ ಶಿಲ್ಪಿ ಕುಕ್ಕುಜೆ, ಜತ್ತಪ್ಪ ನಾಯ್ಕ ಬೊಳ್ಳಾವು, ಅವನೀಶ್ ಪೆರಿಯಡ್ಕ, ಗಿರೀಶ ಆರ್ತಿಲ, ಸೇಸಪ್ಪ ಗೌಡ ಬೊಳ್ಳಾವು, ಪ್ರಶಾಂತ ಯು., ಹರಿಪ್ರಸಾದ್ ಕೂವೆಚ್ಚಾರು, ಧರ್ಣಪ್ಪ ನಾಯ್ಕ ಬೊಳ್ಳಾವು, ಸುನೀಲ್ ಕುವಾರ್ ದಡ್ಡು, ವಿದ್ಯಾಧರ ಜೈನ್, ಸವಿತಾ ಕೋಡಿ, ಸುಜಾತಕಷ್ಣ ಆಚಾರ್ಯ, ಮಹಾಲಿಂಗ ಕಜೆಕ್ಕಾರು, ಶೀನಪ್ಪ ಗೌಡ ಬೊಳ್ಳಾವು, ಮಂಜುನಾಥ ಭಟ್ ಪಿ., ಜಗದೀಶ ಕಂಪ, ವಸಂತ ನಾಯ್ಕ ಬೊಳ್ಳಾವು, ರಾಧಾಕೃಷ್ಣ ಭಟ್ ಬೊಳ್ಳಾವು, ವಸಂತ ಕುಂಟಿನಿ, ಹರೀಶ್ ನಾಯಕ್ ನಟ್ಟಿಬೈಲು, ರಾಮಚಂದ್ರ ಗೌಡ ನೆಡ್ಚಿಲು, ಜಗದೀಶ್ ಪೂಜಾರಿ ಪರಕಜೆ, ವೀರಪ್ಪ ಗೌಡ ಪುಳಿತ್ತಡಿ ಮತ್ತಿತರರಿದ್ದರು. ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರಮಜಲು ಸ್ವಾಗತಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net