ಗ್ಯಾರೇಜ್ ಮಾಲೀಕರ ಸಂಘ ಕಟ್ಟಡ ನಿರ್ಮಾಣಕ್ಕೆ ನಿವೇಶನ - ಶಾಸಕ ಅಶೋಕ್ ಕುಮಾರ್ ರೈ ಭರವಸೆ - ವಿಟ್ಲ ಗ್ಯಾರೇಜ್ ಮಾಲೀಕರ ಸಂಘ ಪದಗ್ರಹಣ

PTR_26 OCT_2
Published on

ವಿಟ್ಲ: ಗ್ಯಾರೇಜ್ ಕಾರ್ಮಿಕರನ್ನು ಸರ್ಕಾರದ ಕಾರ್ಮಿಕ ಯೋಜನೆಗೆ ಸೇರಿಸಲಾಗಿದೆ. ವಿಟ್ಲ ವಲಯ ಗ್ಯಾರೇಜ್ ಮಾಲೀಕರ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಕೊಡುವಲ್ಲಿ ಪೂರಕವಾಗಿ ಸ್ಪಂದಿಸುತ್ತೇನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಚಂದಳಿಕೆಯಲ್ಲಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕರ ಸಂಘ ವಿಟ್ಲ ವಲಯ ಮಹಾಸಭೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪೂರ್ವಾಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್ ಮಾತನಾಡಿ, ಗ್ಯಾರೇಜ್ ಕಾರ್ಮಿಕರಲ್ಲಿ ವೃತ್ತಿ ಬದ್ಧತೆಯೊಂದಿಗೆ ಸೇವಾ ಮನೋಭಾವ ಇದ್ದಾಗ ಜನಮಾನಸದಲ್ಲಿ ಗುರುತಿಸಿ ಕೊಳ್ಳುತ್ತಾರೆ. ಗ್ಯಾರೇಜ್ ಸಹಾಯವಾಣಿ ಇದ್ದರೆ ಜನರಿಗೆ ಅನುಕೂಲವಾಗುತ್ತದೆ. ಗ್ಯಾರೇಜ್ ಕಾರ್ಮಿಕರು ಜೀವವಿಮೆಯಂತಹ ಭದ್ರತೆ ಮಾಡಬೇಕು ಎಂದರು.

ವಿಟ್ಲ ಜೂನಿಯರ್ ಕಾಲೇಜು ನಿವೃತ್ತ ಪ್ರಾಂಶುಪಾಲ ಎಚ್.ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ವಿಟ್ಲ ವಲಯ ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಲಿಯೋ ಡಿ ಲಸ್ರಾದೋ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಎಚ್.ಸುಬ್ರಹ್ಮಣ್ಯ ಭಟ್, ದಯಾನಂದ ಜಿ.ಕತ್ತಲ್‌ಸಾರ್, ಉದ್ಯಮಿ ಅಜೀಜ್ ಸನ, ರಫೀಕ್ ಕೆ.ಎಂ., ದಿನೇಶ್ ಬಂಗೇರ ಮಂಗಳೂರು ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಗ್ಯಾರೇಜ್ ಮಾಲೀಕರ ಸಂಘ ಮಂಗಳೂರು ಅಧ್ಯಕ್ಷ ದಿನಕರ ಕುಲಾಲ್, ದಿವಾಕರ ಎಂ., ಸೌಹಾದ ಸಹಕಾರಿ ಸಂಘ ಅಧ್ಯಕ್ಷ ಜನಾರ್ದನ ಅತ್ತಾವರ, ಉದ್ಯಮಿ ಸಂಜೀವ ಪೂಜಾರಿ ಉಪಸ್ಥಿತರಿದ್ದರು.

ಗೌರವ ಸಲಹೆಗಾರ ಎನ್. ಸುಂದರ ಆಚಾರ್ಯ ಸ್ವಾಗತಿಸಿದರು. ಲೆಕ್ಕಪರಿಶೋಧಕ ಪಡಾರು ಚಂದ್ರಶೇಖರ ಭಟ್ ಪ್ರಸ್ತಾವನೆಗೈದರು. ಮಾಜಿ ಕಾರ್ಯದರ್ಶಿ ರಾಜಶೇಖರ ವಂದಿಸಿದರು. ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net