ದೇವರನ್ನು ಪೂಜಿಸುವುದು ಪ್ರತಿಯೊಬ್ಬರ ಕರ್ತವ್ಯ

parayana
Published on

ಹುಬ್ಬಳ್ಳಿ:ಪ್ರತಿಯೊಬ್ಬರ ಮೇಲೆ ದೇವ ಋಣ, ಋಷಿ ಋಣ, ಪಿತೃ ಋಣ ಇರುತ್ತದೆ. ಸೂರ್ಯ, ಚಂದ್ರ, ಅಗ್ನಿ, ವಾಯು, ಇನ್ನಿತರ ದೇವರಿಂದ ನಮ್ಮ ಬದಕು. ಇವರಿಲ್ಲದೇ ನಮ್ಮ ಬದುಕೇ ಇಲ್ಲ. ದೇವರನ್ನು ಪೂಜಿಸುವುದು ಹಾಗೂ ಸ್ಮರಿಸುವುದು ನಮ್ಮೆಲ್ಲರ ಪರಮ ಕರ್ತವ್ಯ ಎಂದು ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳವರು ಹೇಳಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾರಾಯಣ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ದೇವ ಋಣ, ಋಷಿ ಋಣ, ಪಿತೃ ಋಣ ತೀರಿಸುವುದು ಮುಖ್ಯ ಎಂದರು.

ಶ್ರೀಪಾದಂಗಳನ್ನು ಪೂರ್ಣ ಕುಂಭ, ವೇದ ಘೊಷದಿಂದ ಬರಮಾಡಿಕೊಳ್ಳಲಾಯಿತು. ಪ್ರವಚನ ಪ್ರವೀಣ ಪಂ. ಡಾ. ವೆಂಕಟನರಸಿಂಹಾಚಾರ್ಯ ಜೋಶಿ ಸ್ವಾಗತಿಸಿದರು. ರಘೊತ್ತಮ ಅವಧಾನಿ ಪ್ರಾಸ್ತಾವಿಕ ಮಾತನಾಡಿದರು. ಸುಮಂಗಲೆಯರಿಂದ ಭಜನೆ, ಪಾರಾಯಣ ನಡೆದವು. ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ಡಾ. ಶ್ರೀನಾಥ, ರಮೇಶ ಅಣ್ಣಿಗೇರಿ, ಪೊ›. ವಾಮನ ಭಾದ್ರಿ, ಆನಂದ ದೇಶಪಾಂಡೆ, ಗುರುನಾಥ ಸರದೇಶಮುಖ, ಶ್ರೀನಿವಾಸ ಪಟ್ಟಣಕುಡಿ, ವಿಠ್ಠಲ ಅಂಬೇಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net