

ವಿಜಯವಾಣಿ ಸುದ್ದಿಜಾಲ ಗದಗ
ದೇಶದಲ್ಲಿ ಗುಲಾಮಿ ಮನಸ್ಥಿತಿಯನ್ನು ಕಾಂಗ್ರೆಸ್ ಬೇರೂರುವಂತೆ ಮಾಡಿತ್ತು. ಇಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾರತವನ್ನು ವಿಶ್ವಗುರು ಮಾಡಿದೆ. ಕಾಂಗ್ರೆಸ್ ಸರ್ಕಾರ ಗರೀಬಿ ಹಠಾವೋ ಬದಲಾಗಿ, ಗರೀಬರ ಹಠಾವೋ ಮಾಡಿದೆ ಮಾಜಿ ಶಾಸಕ ಪಿ. ರಾಜೀವ ಹೇಳಿದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ ಕಾರ್ಯಕ್ರಮ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಹೇಗಿರಬೇಕು, ಕಾರ್ಯಕರ್ತರನ್ನು ಪಕ್ಷ ಹೇಗೆ ಗುರುತಿಸುತ್ತದೆ ಎಂಬುದಕ್ಕೆ ಇಂದಿನ ಕಾರ್ಯಕ್ರಮ ಸಾಕ್ಷಿ. ಮುಂಬರುವ ಲೋಕಸಭಾ ಚುನಾವಣೆ ಫಲಿತಾಂಶ ವಿಶ್ವದ ಚಿತ್ರಣ ಬದಲಾಯಿಸಲಿದೆ ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿ ದೇಶದಲ್ಲಿ ಲಸಿಕೆಗಳ ಸಂಶೋಧನೆ ನಡೆಯಲಿಲ್ಲ. ವಿದೇಶದಲ್ಲಿ ಸಂಶೋಧನೆ ಆಗಿರುವ ಲಸಿಕೆಗಳು ಹತ್ತಾರು ವರ್ಷಗಳ ನಂತರ ಭಾರತ ಸರ್ಕಾರದ ಖರೀದಿ ಮಾಡುತ್ತಿತ್ತು. ಬಿಜೆಪಿ ಅಧಿಕಾರದಲ್ಲಿ ನಮ್ಮಲ್ಲೇ ಸಂಶೋಧನೆ ನಡೆಯುತ್ತಿವೆ. ಕೋವಿಡ್ ಲಸಿಕೆ ದೇಶದಲ್ಲಿ ಸಂಶೋಧನೆ ಮಾಡಿದ ಲಸಿಕೆ ಆಗಿದ್ದು, 80 ಕ್ಕೂ ಹೆಚ್ಚು ದೇಶಗಳಿಗೆ ಲಸಿಕೆ ಪೂರೈಕೆ ಮಾಡಿದ ಕೀತಿರ್ ಭಾರತ ದೇಶಕ್ಕೆ ಸಲ್ಲುತ್ತದೆ. ಜಗತ್ತಿನ ಹಲವು ದೇಶಗಳು ದಿವಾಳಿತನ ಅನುಭವಿಸುತ್ತಿವೆ. ಭಾರತ ಆಥಿರ್ಕತೆಯಲ್ಲಿ ಮುನ್ನುಗುತ್ತಿದೆ. ಇದೇ ಭಾರತದ ತಾಕತ್ತು. ವಿಶ್ವವೇ ಭಾರತಕ್ಕೆ ತಲೆಬಾಗುತ್ತಿದೆ ಎಂದು ಪಿ.ರಾಜೀವ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪಿ.ರಾಜೀವ, 10 ಕೆಜಿ ಅಕ್ಕಿ ಇನ್ನೂ ರೈತರಿಗೆ ಸಿಗುತ್ತಿಲ್ಲ. ಮಾಜಿ ಸಿಎಂ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್ ನಲ್ಲಿ ರೈತರಿಗಾಗಿ 7500 ಕೋಟಿ ರೂ. ಬಜೆಟ್ ಘೋಷಿಸಿದ್ದರು. ಸಿದ್ದರಾಮಯ್ಯ ಸರ್ಕಾರ ತಮ್ಮ ಬಜೆಟ್ ನಲ್ಲಿ 3500 ಕೋಟಿ ರೂ. ಮಾತ್ರ ಮೀಸಲಿಟ್ಟು, ರೈತರಿಗೆ ಅನ್ಯಾಯ ಎಸಗಿದೆ. 700 ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆ ಆಗಬೇಕು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 11500 ಕೋಟಿ ಅನುದಾನವನ್ನು ಬೇರೆ ಇಲಾಖೆಗೆ ವರ್ಗಾಯಿಸಿ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಪಿ.ರಾಜೀವ ಆರೋಪಿಸಿದರು.