ಗೌರಿ ಗಣೇಶೋತ್ಸವದ ಅಧ್ಯಕ್ಷರಾಗಿ ಪಿ.ನಿತಿನ್ ಆಯ್ಕೆ

p.nithin
Published on

ಮಡಿಕೇರಿ: ಶ್ರೀ ಗಣಪತಿ ಸೇವಾ ಸಮಿತಿ ಗಾಂಧಿನಗರ ವಿರಾಜಪೇಟೆ ೩೦ನೇ ವರ್ಷದ ಗೌರಿ ಗಣೇಶೋತ್ಸವದ ಅಧ್ಯಕ್ಷರಾಗಿ ಪಿ.ನಿತಿನ್‌ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.


ವಿರಾಜಪೇಟೆ ಪ್ರವಾಸಿ ಮಂದಿರದಲ್ಲಿ ಮಾಜಿ ಅಧ್ಯಕ್ಷ ಪಿ.ಎ.ಮಂಜುನಾಥ್‌ರವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಆಯ್ಕೆ ಮಾಡಲಾಯಿತು.


ಈ ಸಂದರ್ಭ ನಿತಿನ್ ಮಾತನಾಡಿ, ಮಂಗಳವಾರ ಗಣೇಶ ಚತುರ್ಥಿಯ ದಿನದಂದು ಬೆಳಿಗ್ಗೆ ೬:೦೦ ಗಂಟೆಗೆ ಗಣಪತಿ ಹೋಮ, ೧೨ ಗಂಟೆಗೆ ಗಣಪತಿಮೂರ್ತಿಯ ಪ್ರತಿಷ್ಠಾಪನೆ ಮತ್ತು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿದೆ. ಹತ್ತು ದಿನ ವಿಶೇಷಪೂಜಾ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಸೆ೯ ರಂದು ರಾತ್ರಿ ನಗರದ ಮುಖ್ಯಬೀದಿಗಳಲ್ಲಿ ಅದ್ದೂರಿಯ ವಾದ್ಯಮೇಳ, ಮೆರವಣಿಗೆಯೊಂದಿಗೆ ಸೆ೧೦ರಂದು ಬೆಳಗಿನ ಜಾವ ಗೌರಿ ಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ತಿಳಿಸಿದರು.


ಗೌರವ ಅಧ್ಯಕ್ಷರುಗಳಾಗಿ ಕುಯ್ಮಂಡ ರಾಕೇಶ್ ಬಿದಪ್ಪ ಮತ್ತು ಪಿ.ಎ.ಮಂಜುನಾಥ್, ಉಪಾಧ್ಯಕ್ಷರಾಗಿ ಐಚಂಡ ಸದಾ, ಕಾರ್ಯದರ್ಶಿಯಾಗಿ ರಂಜನ್ ನಾಯ್ಡು, ಜಂಟಿ ಕಾರ್ಯದರ್ಶಿಯಾಗಿ ಚಿಲ್ಲವಂಡ ಗಣಪತಿ, ಖಜಾಂಜಿಯಾಗಿ ರಂಜನ್ ನಾಯ್ಡು ಮತ್ತು ಪ್ರಿತೇಶ್ ರೈ ಹಾಗೂ ಸದಸ್ಯರಾಗಿ ಕೌಶಿಕ್, ಸುಬ್ರಮಣಿ, ಚೇಂದ್ರಿ ಮಾಡ ಪೊನ್ನಣ್ಣ, ಮುಂಡಿಯೊಳಂಡ ಕುಟ್ಟಪ್ಪ, ನಂಬುಡುಮಾಡ ದೀಕ್ಷಿತ್, ಬೊಪ್ಪಂಡ ಚಂಗಪ್ಪ, ಅಲ್ಲಾರಂಡ ಚಿನ್ನಪ್ಪ ಹಾಗೂ ವೇದಾಂತ್ ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net