

ವಿಜಯವಾಣಿ ಸುದ್ದಿಜಾಲ ಮಂಗಳೂರು
ಇಂದು ದೇಶದ ಸಮಸ್ತ ವಿಶ್ವಕರ್ಮ ಸಮುದಾಯ ಸಂಭ್ರಮಿಸಬೇಕಾದ ದಿನ. ಯೋಜನೆಯಲ್ಲಿ ತರಬೇತಿ ಜತೆಗೆ ಸಾಲ ಸೌಲಭ್ಯದ ನೆರವು ಕೂಡ ದೊರೆಯುತ್ತದೆ. ಎಲ್ಲ ಕುಶಲಕರ್ಮಿಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕೇಂದ್ರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಷೋತ್ತಮ ರೂಪಾಲ ಹೇಳಿದರು.
ದೇಶದ ಕರಕುಶಲಕರ್ಮಿಗಳು ಸ್ವಾವಲಂಬಿಯಾಗಿ ಬದುಕಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ‘ಪಿಎಂ ವಿಶ್ವಕರ್ಮ’ ಯೋಜನೆಗೆ ಟಿಎಂಎ ಪೈ ಸಭಾಂಗಣದಲ್ಲಿ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಅಕ್ಕಸಾಲಿಗರು, ಚಮ್ಮಾರರು, ಮೀನಿನ ಬಲೆ ತಯಾರಿಕರು, ಬಡಗಿ, ಕಮ್ಮಾರರು ಸಹಿತ 18 ವಿವಿಧ ಸಾಂಪ್ರದಾಯಿಕ ಕಲೆಗಳಲ್ಲಿ ತೊಡಗಿಕೊಂಡಿರುವ ಕರಕುಶಲಕರ್ಮಿಗಳಿಗೆ ಘೋಷಿಸಿದ ಅತಿದೊಡ್ಡ ಯೋಜನೆ ಇದು ಎಂದ ಅವರು, ದೇಶದ ಕೋಟ್ಯಂತರ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. ಅಡೆತಡೆಗಳಿಲ್ಲದೆ ನೇರವಾಗಿ ಒಂದು ಲಕ್ಷ ರೂ.ನಿಂದ 2 ಲಕ್ಷ ರೂ.ತನಕ ಸಾಲ ದೊರೆಯಲಿದೆ. ಕರಕುಶಲಕರ್ಮಿಗಳು ಬದುಕನ್ನು ಇನ್ನಷ್ಟು ಸುಂದರವಾಗಿಸಿಕೊಳ್ಳಬಹುದು. ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿಕೊಂಡು ಕರಕುಶಲತೆಯಲ್ಲಿ ನೈಪುಣ್ಯ ಸಾಧಿಸಬಹುದು ಎಂದರು.
ರಾಜ್ಯ ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ, ಶಾಸಕ ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಸುಧೀರ್ ಶೆಟ್ಟಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಹೈದರಾಬಾದ್‌ನ ನ್ಯಾಷನಲ್ ಫಿಶರೀಸ್ ಡೆವಲಪ್‌ಮೆಂಟ್ ಬೋರ್ಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ನರಸಿಂಹ ಮೂರ್ತಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಉಪಸ್ಥಿತರಿದ್ದರು. ಮರೈನ್ ಫಿಶರೀಸ್ ಜತೆ ಕಾರ್ಯದರ್ಶಿ ನೀತು ಕುಮಾರಿ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುಳಾ ಶೆಟ್ಟಿ ಹಾಗೂ ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.
(((((ಬಾಕ್ಸ್))
ಮೀನುಗಾರಿಕಾ ಕಾಲೇಜು ವಿವಿಯಾಗಲಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಸದ್ಯ ಬೀದರ್‌ನಲ್ಲಿ ಮೀನುಗಾರಿಕಾ ವಿಶ್ವವಿದ್ಯಾಲಯವಿದೆ. ಕೃಷಿ ವಿಶ್ವವಿದ್ಯಾಲಯ ವ್ಯವಸ್ಥೆಯಡಿ ಭಾರತದ ಮೊದಲ ಮೀನುಗಾರಿಕಾ ಕಾಲೇಜಾಗಿ 1969ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಸಚಿವರಲ್ಲಿ ಮನವಿ ಮಾಡಿದರು. ವಿಶ್ವಕರ್ಮ ಸಮುದಾಯದ ಬೆಳವಣಿಗೆಯನ್ನು ಲಕ್ಷೃದಲ್ಲಿಟ್ಟುಕೊಂಡು ಪ್ರಧಾನಿ ಜಾರಿಗೊಳಿಸುತ್ತಿರುವ 13 ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆಯಿಂದ ಕರಕುಶಲಕರ್ಮಿಗಳ ಬದುಕಿನಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದರು.
ಫೋಟೋ…………….ಎಂಎನ್‌ಜಿ- ಎಸ್‌ಇಪಿ 17- ಟಿಎಂಎ ಪೈ
‘ಪಿಎಂ ವಿಶ್ವಕರ್ಮ’ ಯೋಜನೆಗೆ ಮಂಗಳೂರಿನಲ್ಲಿ ಕೇಂದ್ರ ಸಚಿವ ಪರಷೋತ್ತಮ ರೂಪಾಲ ಭಾನುವಾರ ಚಾಲನೆ ನೀಡಿದರು. ಮೀನುಗಾರಿಕೆ ಸಚಿವ ಮಂಕಾಳ ಎಸ್.ವೈದ್ಯ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಸುಧೀರ್ ಶೆಟ್ಟಿ, ಮೀನುಗಾರಿಕಾ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ಕಲ್ಲೇರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮೊದಲಾದವರು ಉಪಸ್ಥಿತರಿದ್ದರು.