ಜಾಬಿನ್ ಕಾಲೇಜಿಗೆ ಯುಜಿಸಿ ಸ್ವಾಯತ್ತತೆ

Published on

ಹುಬ್ಬಳ್ಳಿ: ನಗರದ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯಕ್ಕೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು 4ನೇ ಬಾರಿಗೆ ಸ್ವಾಯತ್ತತೆಯ ಮಾನ್ಯತೆ ನೀಡಿದೆ.

ಗುಣಾತ್ಮಕ ಶಿಣ ಮತ್ತು ಸೇವೆಯನ್ನು ಪರಿಗಣಿಸಿ 2007ರಿಂದಲೂ ಮಹಾವಿದ್ಯಾಲಯ ಈ ಮಾನ್ಯತೆ ಪಡೆಯುತ್ತಿದ್ದು, ಇದೀಗ 10 ವರ್ಷಗಳ (2022&2023 ರಿಂದ 2032ವರೆಗೆ) ಮಾನ್ಯತೆ ನೀಡಿದೆ.

ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ಪರಿಣಿತರ ತಂಡ ಮಹಾವಿದ್ಯಾಲಯದ ವಿವಿಧ ವಿಭಾಗಗಳನ್ನು ಪರಿಶೀಲನೆ ನಡೆಸಿದೆ.

ಪರೀಕ್ಷೆ ವಿಭಾಗ, ಗ್ರಂಥಾಲಯ, ಜಿಮಖಾನಾ, ಪ್ರಯೋಗಾಲಯ, ಭಾಷಾ ಪ್ರಯೋಗಾಲಯ, ಸಂಶೋಧನೆಗಳು, ಪ್ಲೇಸ್ಮೆಂಟ್ ವಿಭಾಗ, ಸಸ್ಯಶಾಸ್ತ್ರ ಮ್ಯೂಜಿಯಂ, ಪ್ರಾಣಿಶಾಸ್ತ್ರ ಮ್ಯೂಜಿಯಂ ಮತ್ತು ಆನೆಯ ಅಸ್ತಿ ಪಂಜರ, ಕ್ರೀಡಾಂಗಣ ಮತ್ತು ತೋಟ, ಔಷಧ ಸಸ್ಯಗಳು, ವಸತಿ ನಿಲಯಗಳಲ್ಲಿ ವಿದ್ಯಾಥಿರ್ಗಳಿಗೆ ಮತ್ತು ಸಿಬ್ಬಂದಿಗೆ ನೀಡುತ್ತಿರುವ ಸೌಲಭ್ಯಗಳನ್ನು ಮತ್ತು ಮುಂತಾದ ಕಾರ್ಯಕ್ರಮಗಳನ್ನು ಅವಲೋಕಿಸಿ ಈ ಮಾನ್ಯತೆ ನೀಡಿದೆ.

ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ವಾಯತ್ತತೆ ಪಡೆದ ಮೊದಲ ಮಹಾವಿದ್ಯಾಲಯ ಇದಾಗಿದೆ. ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಪ್ರಾಚಾರ್ಯ ಡಾ. ಎಲ್.ಡಿ. ಹೊರಕೇರಿ ಇತರರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net