

ವಿಜಯಪುರ:ಭೂಮಿಯ ಮೇಲಿನ ಜೀವ ಸಂಕುಲಗಳಿಗೆ ರಕ್ಷಣಾ ಹೊದಿಕೆಯಾಗಿ ಓಜೋನ್ ಪದರವು ಕಾರ್ಯನಿರ್ವಹಿಸುತ್ತಿದೆ. ಜೀವ ಸಂಕುಲಗಳಿಗೆ ಮಾರಕವಾಗಿರುವ ನೇರಳಾತೀತ ವಿಕಿರಣ ಅಥವಾ ಯುವಿ ಬೆಳಕು ಎಂದು ಕರೆಯಲಾದ ಒಂದು ರೀತಿಯ ವಿಕಿರಣವನ್ನು ತಡೆಯುವಲ್ಲಿ ಓಝೋನ್ ಪದರದ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಧ್ಯಾಪಕ ಮಲ್ಲನಗೌಡ ಬಿರಾದಾರ ಹೇಳಿದರು.
ನಗರದ ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದ ಭೂಗೋಳ ಶಾಸ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ಓಝೋನ್ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹವಾಮಾನ ವೈಪರೀತ್ಯಗಳ, ಪರಿಸರ ಮಾಲಿನ್ಯದಂತಹ ಪ್ರಕ್ರಿಯೆಗಳಿಂದ ಓಝೊನ್ ಪದರವು ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವೆಲ್ಲರೂ ಮನುಕುಲದ ಉಳಿವಿಗಾಗಿ ಹಾಗೂ ಮುಂದಿನ ಜನಾಂಗಕ್ಕೆ ನಿಸರ್ಗದ ಪರಿಕರಗಳನ್ನು ಉಳಿಸಿ ಸಂರಸಲು ಓಝೊನ್ ಪದರ ರಸಬೇಕಿದೆ. ಹೀಗಾಗಿ, ಸಮುದಾಯವನ್ನು ಎಚ್ಚರಿಸಲು ಹಾಗೂ ಜಾಗೃತಿ ಮೂಡಿಸಲು ಪ್ರತಿ ವರ್ಷ ಈ ಓಝೊನ್ ದಿನ ಆಚರಿಸಲಾಗುತ್ತಿದೆ ಎಂದರು.ಅತಿಥಿಗಳಾಗಿ ಆಗಮಿಸಿದ್ದ ಪ್ರಾಧ್ಯಾಪಕಿ ರಾಜಶ್ರೀ ದರಬಾರ ಮಾತನಾಡಿ, ಓಝೋನ್ ಪದರವು ಮಾನವನ ದೇಹಕ್ಕೆ ಆಮ್ಲಜನಕದಷ್ಟೇ ಮುಖ್ಯವಾದುದು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ.ಚ್. ಮಣೂರ ಮಾತನಾಡಿ, ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಮಾನವ ಪರಿಸರ ನಾಶ ಪಡಿಸುತ್ತಿದ್ದಾನೆ. ವಿದ್ಯಾರ್ಥಿಗಳು ಆಧುನಿಕತೆಗೆ ಮಾರು ಹೋಗದೇ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಶ್ರಮಿಸಬೇಕೆಂದು ಸಲಹೆ ನೀಡಿದರು.ಉಪನ್ಯಾಸಕ ಮಹಾಂತೇಶ ಕೋಟ್ಯಾಳ ಮಾತನಾಡಿದರು. ಉಪನ್ಯಾಸಕಿ ಸೀಮಾ ಪಾಟೀಲ, ಸುಭಾಸ ಪಾಟೀಲ, ಕಾಶಿನಾಥ ಕೋಣ್ಣೆನ್ನವರ, ಎಂ.ಕೆ. ಕುಂಬಾರ ಮತ್ತಿತರರಿದ್ದರು.
ವಿಜಯಪುರದ ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ವಿಶ್ವ ಓಝೋನ್ ದಿನಾಚರಣೆಯನ್ನು ಮಲ್ಲನಗೌಡ ಬಿರಾದಾರ ಉದ್ಘಾಟಿಸಿದರು. ಜಿ.ಎಚ್. ಮಣೂರ, ರಾಜಶ್ರೀ ದರಬಾರ, ಮಹಾಂತೇಶ ಕೋಟ್ಯಾಳ ಇದ್ದಾರೆ.