ಸಿಂಪಿ ಸಮಾಜದ ಜನರು ಕಾಯಕಜೀವಿಗಳು

4-msk-1A
ಮಸ್ಕಿಯಲ್ಲಿ ನಾಗಲಿಕ ಸಿಂಪಿ ಸಮಾಜದ ಮಹಿಳೆಯರು ಮೆರವಣಿಗೆಯಲ್ಲಿ ಕೋಲಾಟ ಆಡಿದರು.
Published on

ಮಸ್ಕಿ: ವೀರಶೈವ ಲಿಂಗಾಯತ ಸಮಾಜದಲ್ಲಿ ಸಿಂಪಿ ಜನಾಂಗ ದೈವಭಕ್ತರಾಗಿದ್ದು, ಕಾಯಕ ಜೀವಿಗಳಾಗಿದ್ದಾರೆ. ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಂಘಟಿತರಾಗಬೇಕಾದ ಅಗತ್ಯವಿದೆ ಎಂದು ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಶಿವಾಚಾರ್ಯರು ಹೇಳಿದರು.

ಪಟ್ಟಣದ ಜಡೆಯ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಮತ್ತು ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಭಯ್ಯಸ್ವಾಮಿ ಶಾಸ್ತ್ರಿ ಮಾತನಾಡಿ, ಮಸ್ಕಿ ಪಟ್ಟಣದಲ್ಲಿ ಸಿಂಪಿ ಸಮಾಜದ ಜನರು ಎಲ್ಲರ ಪ್ರೀತಿ ಗಳಿಸಿಕೊಂಡು ಸೌಹಾರ್ದದಿಂದ ಜೀವನ ನಡೆಸುತ್ತಿರುವುದು ಮಾದರಿಯಾಗಿದೆ ಎಂದರು.

ನಾಗಲಿಕ ಸಿಂಪಿ ಸಮಾಜದ ಅಧ್ಯಕ್ಷ ಸುರೇಶ ಹರಸುರು, ಗೌರವ ಅಧ್ಯಕ್ಷ ದೊಡ್ಡಪ್ಪ ಬುಳ್ಳಾ, ಪ್ರಮುಖರಾದ ಮಲ್ಲಪ್ಪ ಗಟ್ಟಿ, ಮಲ್ಲಿಕಾರ್ಜುನ ಕಂದಗಲ್, ಶ್ರೀಧರ ಬಳ್ಳೊಳ್ಳಿ, ಶಂಕರಲಿಂಗಪ್ಪ ಧನಶಟ್ಟಿ, ಅಮರೇಶ ಹರಸುರು ಇತರರಿದ್ದರು.

ವಿಶೇಷ ಪೂಜೆ ಸಲ್ಲಿಕೆ: ಬೆಳಗ್ಗೆ ಜಡೆಶಂಕರ ದೇವರಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜೆ, ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಕುಂಭಹೊತ್ತ ಮಹಿಳೆಯರು, ಸಂಡೂರಿನ ಚಂದ್ರಶೇಖರ ಸ್ವಾಮಿ ವೀರಗಾಸೆ ನೃತ್ಯ, ನಂದಿಕೋಲು ಕುಣಿತ, ಡೋಲು ವಾದ್ಯ ಸೇರಿ ವಿವಿಧ ವಾದ್ಯಗಳ ಕಲಾ ತಂಡಗಳು ಭಾಗವಹಿಸಿದ್ದವು. ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ದೇವಸ್ಥಾನಕ್ಕೆ ಭೇಟಿ ಜಡೆ ಶಂಕರಲಿಂಗ ದೇವರ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net