

ಬೆಳಗಾವಿ: ಜಿಲ್ಲಾಸ್ಪತ್ರೆ (ಬಿಮ್ಸ್)ಯ ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.
ರೋಗಿಗೆ ಆಕ್ಸಿಜನ್ ಹಚ್ಚುವ ಸಂದರ್ಭದಲ್ಲಿ ಸಿಬ್ಬಂದಿ, ಆಕ್ಸಿಜನ್ ಸಿಲಿಂಡರ್ ಬದಲಿಸುತ್ತಿದ್ದಾಗ ಅನಿಲ ಸೋರಿಕೆಯಾಗಿ ಘಟನೆ ನಡೆದಿದೆ.
ಕರ್ತವ್ಯ ನಿರತ ಓರ್ವ ವೈದ್ಯ, ಓರ್ವ ನರ್ಸ್ ಹಾಗೂ ವಾರ್ಡ್ ಬಾಯ್‌ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸಿಲಿಂಡರ್‌ನಿಂದ ಸೋರಿಕೆಯಾದ ಅನಿಲ ಹಾಗೂ ಸ್ಯಾನಿಟೈಸರ್ ಮಿಕ್ಸ್ ಆಗಿ ಸ್ಫೋಟವಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ರೋಗಿಗಳು ಭಯಬೀತರಾಗಿದ್ದರು. ಆಸ್ಪತ್ರೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.