ಸಿಎಚ್‌ಸಿಗಳಲ್ಲೂ ಆಕ್ಸಿಜನ್ ಬೆಡ್, ಆರು ಕಡೆ ತಲಾ 30 ಹಾಸಿಗೆ ವ್ಯವಸ್ಥೆ

udp_new
Published on

ಉಡುಪಿ: ಜಿಲ್ಲಾ ಕೇಂದ್ರದಲ್ಲಿ ಆರೋಗ್ಯ ಸೇವೆಯ ಮೇಲಿನ ಒತ್ತಡ ಕಡಿಮೆ ಮಾಡಲು ತಾಲೂಕು ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲೇ ಆಕ್ಸಿಜನ್ ಬೆಡ್‌ಗಳನ್ನು ಕಾಯ್ದಿರಿಸಲು ಜಿಲ್ಲಾಡಳಿತ ಮುಂದಾಗಿದೆ.

ಪ್ರಸಕ್ತ ಶಿರ್ವ, ಬ್ರಹ್ಮಾವರ, ನಿಟ್ಟೆ ಸಹಿತ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಆಕ್ಸಿಜನ್ ಬೆಡ್‌ಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಇದರಿಂದ 180 ಆಕ್ಸಿಜನ್ ಬೆಡ್‌ಗಳು ಸ್ಥಳೀಯ ಮಟ್ಟದಲ್ಲೇ ಲಭ್ಯವಾಗಲಿವೆ. ಅಲ್ಲದೆ ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 140 ಆಕ್ಸಿಜನ್ ಬೆಡ್‌ಗಳು, 200 ಸಾಮಾನ್ಯ ಬೆಡ್‌ಗಳಿವೆ. ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 66 ಆಕ್ಸಿಜನ್ ಬೆಡ್, 60 ಸಾಮಾನ್ಯ ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ 38 ಖಾಸಗಿ ಆಸ್ಪತ್ರೆ ಹಾಗೂ ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆ, ಅಜ್ಜರಕಾಡು ಜಿಲ್ಲಾಸ್ಪತ್ರೆ ಸೇರಿ ಒಟ್ಟು 41 ಆಸ್ಪತ್ರೆಗಳಲ್ಲಿ 2,326 ಬೆಡ್‌ಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಒಟ್ಟು 960 ಆಕ್ಸಿಜನ್ ಬೆಡ್‌ಗಳಿದ್ದು, ಉಡುಪಿ ಜಿಲ್ಲೆಯಲ್ಲಿ 250 ಆಕ್ಸಿಜನ್ ಬೆಡ್‌ಗಳು ಭರ್ತಿಯಾಗಿವೆ.

ಬೆಡ್ ಕಣ್ಗಾವಲಿಗೆ ಅಧಿಕಾರಿಗಳು

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ದಾಖಲಾಗುವ ಸಂದರ್ಭ ಬೆಡ್ ವ್ಯವಸ್ಥೆ ಹಾಗೂ ಅಗತ್ಯವಿದ್ದ ಪ್ರಕರಣಗಳಲ್ಲಿ ಆಕ್ಸಿಜನೇಟೆಡ್ ಬೆಡ್ ವ್ಯವಸ್ಥೆ ಮಾಡಲು ವಿವಿಧ ಆಸ್ಪತ್ರೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

ಕುಂದಾಪುರ: ಆದರ್ಶ ಆಸ್ಪತ್ರೆಗೆ ಭಾನು ನಾಯ್ಕ (9743177854), ಚಿನ್ಮಯಿ ಆಸ್ಪತ್ರೆಗೆ ಡಾ.ಸೂರ್ಯನಾರಾಯಣ ಉಪಾಧ್ಯ (9448850501), ನ್ಯೂ ಮೆಡಿಕಲ್ ಸೆಂಟರ್‌ಗೆ ಹರ್ಷವರ್ಧನ ( 9844818655), ಶ್ರೀದೇವಿ ನರ್ಸಿಂಗ್ ಹೋಮ್‌ಗೆ ಸಿ.ರಘುರಾಮ ಶೆಟ್ಟಿ (8277932519), ಮಂಜುನಾಥ ಆಸ್ಪತ್ರೆಗೆ ಕುಸುಮಾಕರ ಶೆಟ್ಟಿ ( 9611819350), ಸರ್ಜನ್ಸ್ ಆಸ್ಪತ್ರೆಗೆ ರಾಜೇಂದ್ರ (94484457831), ವಿನಯ ಆಸ್ಪತ್ರೆಗೆ ಅಶೋಕ್ (8971138955), ಕೋಟೇಶ್ವರ: ಡಾ.ಎನ್.ಆರ್.ಆಚಾರ್ಯ ಆಸ್ಪತ್ರೆಗೆ ಪ್ರೀತಮ್ (8277721129). ಉಡುಪಿ: ಆದರ್ಶ ಆಸ್ಪತ್ರೆಗೆ ಅರುಣ್‌ಕುಮಾರ್ (9448287341), ಸಿಟಿ ಆಸ್ಪತ್ರೆಗೆ ವೀಣಾ (9611282731), ಗಾಂಧಿ ಆಸ್ಪತ್ರೆಗೆ ದೇವಿಪ್ರಸಾದ್(9480878012), ಹೈಟೆಕ್ ಆಸ್ಪತ್ರೆಗೆ ಭುವನೇಶ್ವರಿ (9448999225), ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಅನಿತಾ ಬಿ.ಮುಂಡ್ಳೂರು (9243388835), ಮಿಷನ್ ಆಸ್ಪತ್ರೆಗೆ ವಿಜಯ ಹೆಗ್ಡೆ (98453 80806), ನ್ಯೂ ಸಿಟಿ ಆಸ್ಪತ್ರೆಗೆ ನಾಗಶಯನ (9480346084), ಡಾ.ಟಿ.ಎಂ.ಎ.ಪೈ ಆಸ್ಪತ್ರೆಗೆ ಅಶೋಕ್ (9448624164). ಬ್ರಹ್ಮಾವರ: ಪ್ರಣವ ಆಸ್ಪತ್ರೆಗೆ ಗುರುದತ್(9964669016), ಮಹೇಶ್ ಆಸ್ಪತ್ರೆಗೆ ಕುಮಾರ್ ಬೆಕ್ಕೇರಿ (96329 59459).

ಕಾಪುವಿನಲ್ಲಿ ಐಸಿಯು ಸೌಲಭ್ಯ ಇಲ್ಲ

ಕಾಪು ತಾಲೂಕಿನಲ್ಲಿ ಪಡುಬಿದ್ರಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ 10 ಜನರಲ್ ಹಾಸಿಗೆ ಹಾಗೂ ಕಾಪುವಿನ ಖಾಸಗಿ ಆಸ್ಪತ್ರೆಯೊಂದರಲ್ಲಿ 25 ಜನರಲ್ ಹಾಸಿಗೆ ವ್ಯವಸ್ಥೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ 50 ಶೇಕಡಾ ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡಲಾಗಿದೆ. ಐಸಿಯು ಸೌಲಭ್ಯ ಇಲ್ಲ. ಕೋವಿಡ್ ಐಸಿಯು ಬೇಕಾಗುವ ರೋಗಿಗಳನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

ಬ್ರಹ್ಮಾವರದಲ್ಲಿ ಆಕ್ಸಿಜನ್ ವ್ಯವಸ್ಥೆ

ಬ್ರಹ್ಮಾವರದಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದೆ. 30 ಹಾಸಿಗೆಯನ್ನು ಹೊಂದಿದ್ದು ಕೋವಿಡ್ ಕೇಂದ್ರ ಮಾಡುವಲ್ಲಿ ಕಾದಿರಿಸಲಾಗಿದೆ. ಏಳು ಹಾಸಿಗೆಗೆ ಆಕ್ಸಿಜನ್ ವ್ಯವಸ್ಥೆ ಇದ್ದು ಸಿಲಿಂಡರ್ ವ್ಯವಸ್ಥೆ ಮಾಡಬೇಕಾಗಿದೆ. ಐಸಿಯು ವ್ಯವಸ್ಥೆ ಇಲ್ಲವಾಗಿದೆ.

ಕುಂದಾಪುರ, ಬೈಂದೂರಲ್ಲಿ ಸನ್ನದ್ಧ ಸ್ಥಿತಿ

ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್‌ಗೆ 120 ಬೆಡ್ ಕಾದಿರಿಸಲಾಗಿದೆ. 100 ಆಕ್ಸಿಜನ್ ಬೆಡ್‌ಗಳಿವೆ. 7 ಐಸಿಯು ಪ್ಲಸ್ ಎಚ್‌ಡಿಯು(ಹೈ ಡಿಪೆಂಡೆನ್ಸಿ ಯೂನಿಟ್) ಬೆಡ್, 3 ಹೈ ಪ್ರೊ ಆಕ್ಸಿಜನ್ ಬೆಡ್, 10 ವೆಂಟಿಲೇಟರ್ ಸಹಿತ ಐಸಿಯು ಬೆಡ್‌ಗಳಿವೆ. ಬೈಂದೂರಿನಲ್ಲಿ 30 ಆಕ್ಸಿಜನ್ ಸಹಿತ ಬೆಡ್ ಕಾದಿರಿಸಲಾಗಿದೆ. ಆದರ್ಶ ಆಸ್ಪತ್ರೆಯಲ್ಲಿ 30 ಆಕ್ಸಿಜನ್, 30 ನಾನ್ ಆಕ್ಸಿಜನ್ ಬೆಡ್‌ಗಳಿವೆ.

ಕಾರ್ಕಳದಲ್ಲಿ ಆನ್‌ಲೈನ್ ಮೂಲಕ ದಾಖಲು

ಕಾರ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಪ್ರತ್ಯೇಕವಾಗಿ 66 ಹಾಸಿಗೆಗಳಿವೆ. ಅದರಲ್ಲಿ 10 ಹಾಸಿಗೆಗಳು ಐಸಿಯು ವಾರ್ಡ್‌ನಲವಲಿದೆ. ಆನ್‌ಲೈನ್ ಮೂಲಕವೇ ರೋಗಿಗಳು ದಾಖಲಾಗುತ್ತಿದ್ದಾರೆ. ತುರ್ತಾಗಿ ಬರುವ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಒಳರೋಗಿಗಳಾಗಿ ದಾಖಲಿಸುವ, ಅಗತ್ಯ ಇದ್ದರೆ ಐಸೊಲೇಶನ್ ವಾರ್ಡ್‌ಗೆ ದಾಖಲಿಸಿ, ಬಳಿಕ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net