

ಅಳವಂಡಿ: ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಹಜರತ್ ಸೈಯದ ಮುಸ್ತಫಾ ಖಾದ್ರಿ 222ನೇ ಉರುಸು ಗುರುವಾರ ಅದ್ದೂರಿಯಾಗಿ ಜರುಗಿತು.
ಇದನ್ನೂ ಓದಿ: ಶಾಂತಿ ಸೌಹಾರ್ದದಿಂದ ಉರುಸು ಆಚರಿಸಿ
ಸೈಯದ ಮುಸ್ತಫಾಖಾದ್ರಿ ಗದ್ದುಗೆಗೆ ಭಕ್ತರು ಹೂ ಹಾಗೂ ಸಕ್ಕರೆ ನೈವೇದ್ಯ ಸಮರ್ಪಿಸಿ, ಹರಕೆ ಸಲ್ಲಿಸಿದರು. ಎತ್ತುಗಳನ್ನು ವಿವಿಧ ಹೂಗಳು, ಅಲಂಕಾರ ವಸ್ತುಗಳಿಂದ ಸಿಂಗರಿಸಿ,
ಮಹಿಳೆಯರು ಕಳಸ ಜತೆಗೆ ವಾದ್ಯಮೇಳದೊಂದಿಗೆ ಮನೆಯಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ದರ್ಗಾದವರೆಗೆ ಮೆರವಣಿಗೆ ಮಾಡಿದರು. ನಂತರ ಗದ್ದುಗೆಗೆ ಪ್ರಾರ್ಥನೆ, ಎತ್ತುಗಳನ್ನು ಪೂಜಿಸಿ ನೈವೇದ್ಯ ಸಲ್ಲಿಸಿ ಮರಳಿ ಮನೆಗೆ ತೆರಳಿದರು. ಉರುಸು ಅಂಗವಾಗಿ ರಾತ್ರಿ ಮದ್ದು ಸುಡುವ ಕಾರ್ಯಕ್ರಮ ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು. ಇದನ್ನು ಭಕ್ತರು ಕಣ್ಮುಂಬಿಕೊಂಡರು.