ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಲು ಆಗ್ರಹ: ಬಳ್ಳಾರಿಯಲ್ಲಿ ತಹಸೀಲ್ದಾರ್‌ಗೆ ನೂತನ ವಿಜಯನಗರ ಭಾಗದ ಶಿಕ್ಷಕರ ಮನವಿ

Vijayanagara District Teachers Appeal
ಬಳ್ಳಾರಿಯ ಡಿಸಿ ಕಚೇರಿ ಅವರಣದಲ್ಲಿ ಗ್ರೇಡ್ ಎ ತಹಸೀಲ್ದಾರ್ ಮೆಹತಾಗೆ ಶಿಕ್ಷಕರು ಮನವಿ ಸಲ್ಲಿಸಿದರು.
Published on

ಬಳ್ಳಾರಿ: ಮೂಲಸ್ಥಾನ ಹಾಗೂ ನೂತನ ಜಿಲ್ಲೆ ವಿಜಯನಗರಕ್ಕೆ ಅಭಿಮತ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಅವರಣದಲ್ಲಿ ಗ್ರೇಡ್ ಎ ತಹಸೀಲ್ದಾರ್ ಮೆಹತಾಗೆ ಸರ್ಕಾರಿ ಶಾಲಾ ಶಿಕ್ಷಕರು ಶುಕ್ರವಾರ ಮನವಿ ಸಲ್ಲಿಸಿದರು.

ಈ ಹಿಂದೆ ರಾಜ್ಯದಲ್ಲಿ ನೂತನ ಜಿಲ್ಲೆ ಅಥವಾ ತಾಲೂಕುಗಳು ಮರು ರಚನೆಯಾದ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನೌಕರರಿಗೆ ಅಭಿಮತ ವರ್ಗಾವಣೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬಳ್ಳಾರಿಯನ್ನು ವಿಭಜಿಸಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ನೈಸರ್ಗಿಕ ನ್ಯಾಯದ ಆಧಾರದ ಮೇಲೆ ಮೂಲ ಜಿಲ್ಲೆಗೆ ವರ್ಗಾವಣೆ ಆಗಲು ಅವಕಾಶ ನೀಡಬೇಕು. ಬಳ್ಳಾರಿಯಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ನೌಕರರಿಗೆ ಸ್ವಂತ ಜಿಲ್ಲೆಗೆ ಅಭಿಮತ ವರ್ಗಾವಣೆ ಪ್ರಕ್ರಿಯೆ ಆರಂಭಿಸಿದ್ದು, ಶಿಕ್ಷಣ ಇಲಾಖೆಗೂ ಅನ್ವಯವಾಗುವಂತೆ ಆದೇಶಿಸಿ ಮೂಲನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net