ಗೂಬೆ ಮಾರಾಟ ಯತ್ನ, ಐವರ ಬಂಧನ

1020
Published on

ಚಿಕ್ಕೋಡಿ: ಜೀವಂತ ಗೂಬೆಯನ್ನು 30 ಲಕ್ಷ ರೂ.ಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಗೂಬೆ, ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ. ಕೊಲ್ಲಾಪುರ ಮೂಲದ ಸೂರಜ್ ವಡ್ಡರ (20), ಅರುಣ ಕೊರವಿ (33) ಹಾಗೂ ಚಿಕ್ಕೋಡಿ ತಾಲೂಕಿನ ಕಡಕಲಾಟದ ಸಂದೀಪ ಕೊರವಿ (25), ಕಾರದಗಾದ ಶುಭಂ ಕಾಂಬಳೆ (25) ಹಾಗೂ ಸದಲಗಾದ ಮಯೂರ ಕಾಂಬಳೆ (22) ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net