ತುಂಬಿ ಹರಿಯುತ್ತಿರುವ ಮಲಪ್ರಭೆ

Kudalasangama
ಕೂಡಲಸಂಗಮ-ಅಡವಿಹಾಳ ಸೇತುವೆ ಬಳಿ ತುಂಬಿ ಹರಿಯುತ್ತಿರುವ ಮಲಪ್ರಭೆ.
Published on


ಕೂಡಲಸಂಗಮ: ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಅಧಿಕ ಮಳೆ ಸುರಿದ ಪರಿಣಾಮ ನಾರಾಯಣಪೂರ ಜಲಾಶಯ ಹಿನ್ನೀರಿನ ಮಲಪ್ರಭಾ ನದಿ ದಡದ ಕೂಡಲಸಂಗಮ, ಕೆಂಗಲ್ಲ, ಕಜಗಲ್ಲ, ವರಗೋಡದಿನ್ನಿ, ಹೂವನೂರ, ಬೆಳಗಲ್ಲ, ಇದ್ದಲಗಿ ಮುಂತಾದ ಗ್ರಾಮದ ರೈತರ ಜಮೀನಿಗೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.


ಗುರುವಾರ ಬೆಳಗ್ಗೆಯಿಂದಲೇ ಮಲಪ್ರಭಾ ನದಿಯ ಹರಿವು ಅಧಿಕಗೊಂಡಿದ್ದು ನದಿಯ ದಡದ ಗ್ರಾಮಸ್ಥರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆ 8 ಗಂಟೆವರೆಗೆ ಬಿಟ್ಟು ಬಿಡದೆ ಮಳೆ ಸುರಿದಿದೆ.


ಕೂಡಲಸಂಗಮ-ಅಡವಿಹಾಳ ಸೇತುವೆ ಬಳಿ ತುಂಬಿ ಹರಿಯುತ್ತಿರುವ ಮಲಪ್ರಭೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net