ವಿಪ್ರೊ ತಂಡಕ್ಕೆ ಸಮಗ್ರ ಚಾಂಪಿಯನ್ ಪಟ್ಟ

Overall champion for Wipro team
ವಿಜಯಪುರದ ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ಕಾಮರ್ಸ್ ಕಾಲೇಜಿನ ಬಿಬಿಎ ವಿಭಾಗ ಪಿಯು ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಮಂಚ್-ಮಚ್ಚಾ ವೃತ್ತಿಪರ ಸ್ಪರ್ಧೆಯಲ್ಲಿ ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡಕ್ಕೆ ಡಾ. ಚಿದಾನಂದ ಬ್ಯಾಹಟ್ಟಿ ಸಮಗ್ರ ಚಾಂಪಿಯನಶಿಪ್ ಪ್ರಶಸ್ತಿ ಪ್ರದಾನ ಮಾಡಿದರು. ಲಕ್ಷ್ಮಣ ಪವಾರ, ವರ್ಷಾ ದೇಸಾಯಿ, ಗಂಗಾಧರ ಮಮದಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ಎಎಸ್‌ಪಿ ಕಾಮರ್ಸ್ ಕಾಲೇಜಿನ ಬಿಬಿಎ ವಿಭಾಗದಿಂದ ಶುಕ್ರವಾರ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಂಚ್- ಮಚ್ಚಾ ವೃತ್ತಿಪರ ಸ್ಪರ್ಧೆಯಲ್ಲಿ ಬಿ.ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.

ಬಿಎಲ್‌ಡಿಇ ಸಂಸ್ಥೆಯ ಹೊಸ ಆವರಣದಲ್ಲಿರುವ ಬಿಬಿಎ ಕಾಲೇಜಿನಲ್ಲಿ ನಡೆದ ಈ ವೃತ್ತಿಪರ ಸ್ಪರ್ಧೆಯಲ್ಲಿ ರ‌್ಯಾಂಪ್ ವಾಕ್, ಟೀಮ್ ಬಿಲ್ಡಿಂಗ್, ರಸಪ್ರಶ್ನೆ, ಅಡುಗೆ, ಛಾಯಾಚಿತ್ರ ಸ್ಪರ್ಧೆಗಳು ನಡೆದವು. ಜಿಲ್ಲೆಯ ನಾನಾ ಭಾಗಗಳಿಂದ 29 ಪಿಯು ಕಾಲೇಜುಗಳ ಸುಮಾರು 500 ಜನ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡರು.

ಒಟ್ಟು ಐದು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದವರಿಗೆ ರೂ. 2000 ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ರೂ. 1000 ನಗದು ಬಹುಮಾನ ನೀಡಲಾಯಿತು.

ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜು ಮತ್ತು ಎ.ಎಸ್. ಪಾಟೀಲ ಕಾಮರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಬಹುತೇಕ ಸ್ಪರ್ಧೆಗಳಲ್ಲಿ ಜಯಗಳಿಸಿದರು. ಪ್ರತಿಯೊಂದು ಕಾಲೇಜಿನಲ್ಲಿ ತಲಾ ಎರಡು ಮತ್ತು ಅದಕ್ಕಿಂತಲೂ ಹೆಚ್ಚು ತಂಡಗಳು ಭಾಗವಹಿಸಿದ ಹಿನ್ನೆಲೆಯಲ್ಲಿ ಒಂದೊಂದು ತಂಡಕ್ಕೆ ಒಂದೊಂದು ಹೆಸರಾಂತ ಸಂಸ್ಥೆಗಳ ಹೆಸರುಗಳನ್ನು ನೀಡಲಾಗಿತ್ತು. ಈ ತಂಡಗಳಲ್ಲಿ ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ ತಲಾ ಎರಡು ವಿಭಾಗಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಸಮಗ್ರ ಚಾಂಪಿಯನ್ ಆಗಿ ಹೊರ ಹೊಮ್ಮಿತು.

ಸಂಜೆ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಎ.ಎಸ್. ಪಾಟೀಲ ಕಾಮರ್ಸ್ ಕಾಲೇಜಿನ ಎಂಬಿಎ ವಿಭಾಗದ ನಿರ್ದೇಶಕ ಡಾ. ಚಿದಾನಂದ ಬ್ಯಾಹಟ್ಟಿ, ಸಹಾಯಕ ಪ್ರಾಧ್ಯಾಪಕ ಲಕ್ಷ್ಮಣ ಪವಾರ ಮತ್ತು ವರ್ಷಾ ದೇಸಾಯಿ, ಗಂಗಾಧರ ಮಮದಾಪುರ ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ಅಶ್ವಿನಿ ಯರನಾಳ, ಡಾ. ಮುರಗೇಶ ಪಟ್ಟಣಶೆಟ್ಟಿ, ಮಹಾಂತೇಶ ಕನಮಡಿ, ವಿನಯ ಡರ್ಬಿ, ರವಿ ಚವ್ಹಾಣ, ಡಾ. ಎಸ್.ಬಿ. ಭೈರವಾಡಗಿ, ಎಸ್.ಜಿ. ಜೋಶಿ, ಎಸ್.ವಿ. ವಂಬಾಸೆ ಮತ್ತಿತರರಿದ್ದರು.

ಸ್ಪರ್ಧೆಗಳು ಮತ್ತು ವಿಜೇತ ತಂಡಗಳ ವಿವರ

ಟೀಮ್ ಬಿಲ್ಡಿಂಗ್ (ಒಗ್ಗಟ್ಟಿನಲ್ಲಿ ಬಲವಿದೆ): ಎಸ್.ಎಸ್. ಪಾಟೀಲ ಕಾಮರ್ಸ್ ಪಿಯು ಕಾಲೇಜಿನ ರಿಲಾಯನ್ಸ್ ತಂಡ (ಪ್ರಥಮ), ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ಬಿಪಿಸಿಎಲ್ ತಂಡ (ದ್ವಿತೀಯ)

ಕ್ವಿಜ್ (ವಿಚಾರ ವಿಸ್ಪೋಟ್): ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ (ಪ್ರಥಮ), ಎ.ಎಸ್. ಪಾಟೀಲ ಕಾಮರ್ಸ್ ಪಿಯು ಕಾಲೇಜಿನ ಇನಫೋಸಿಸ್ ತಂಡ (ದ್ವಿತೀಯ)

ಕುಕ್ಕಿಂಗ್ (ಆಹಾರ ಅನುಭವ): ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ಮಹಿಂದ್ರಾ ಆ್ಯಂಡ್ ಮಹಿಂದ್ರಾ ತಂಡ (ಪ್ರಥಮ), ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ (ದ್ವಿತೀಯ)

ಫೋಟೋ ಮತ್ತು ವಿಡಿಯೋಗ್ರಾಫಿ (ಕ್ಷಣಗಳ ಕಥೆಗಳು): ಶ್ರೀ ಬಿ. ಎಂ. ಪಾಟೀಲ ಪಿಯು ಕಾಲೇಜಿನ ಬಿಪಿಸಿಎಲ್ ತಂಡ (ಪ್ರಥಮ), ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ (ದ್ವಿತೀಯ)

ರ‌್ಯಾಂಪ್ ವಾಕ್ (ನೋಡಿ ಸ್ವಾಮಿ ನಾವಿರೋದು ಹೀಗೆ): ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ವಿಪ್ರೊ ತಂಡ (ಪ್ರಥಮ), ಶ್ರೀ ಬಿ.ಎಂ. ಪಾಟೀಲ ಪಿಯು ಕಾಲೇಜಿನ ಆದಿತ್ಯ ಬಿರ್ಲಾ ತಂಡ (ದ್ವಿತೀಯ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net