ಕ್ರೀಡಾಕೂಟದಲ್ಲಿ ಕೆಪಿಎಸ್‌ಗೆ ಸಮಗ್ರ ಪ್ರಶಸ್ತಿ

17-ANP-P1
ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಆನಂದಪುರ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು.
Published on

ಆನಂದಪುರ: ಸಾಗರದಲ್ಲಿ ನಡೆದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆನಂದಪುರ ಕೆಪಿಎಸ್‌ನ ಪ್ರೌಢಶಾಲೆ ಸಮಗ್ರ ಪ್ರಶಸ್ತಿ ಪಡೆದಿದೆ. ಬಾಲಕ, ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ, ಬಾಲಕಿಯ ವಿಭಾಗದಲ್ಲಿ 1500 ಮೀ. ಓಟ(ಜಯಲಕ್ಷ್ಮೀ) ಪ್ರಥಮ, ಉದ್ದ ಜಿಗಿತ (ದೀಪಿಕಾ) ಪ್ರಥಮ, ಹ್ಯಾಮರ್ ಎಸೆತ (ಐಶ್ವರ್ಯ) ಪ್ರಥಮ, 200 ಮೀ. ಓಟ(ದೀಪಿಕಾ) ದ್ವಿತೀಯ, 3000 ಮೀಟರ್ ಓಟ (ಜಯಲಕ್ಷ್ಮೀ) ದ್ವಿತೀಯ, 800 ಮೀಟರ್ ಓಟ (ಜಯಲಕ್ಷ್ಮೀ) ತೃತೀಯ ಹಾಗೂ ಎತ್ತರ ಜಿಗಿತ (ಸಿಂಚನಾ) ತೃತೀಯ ಬಹುಮಾನ ಜಯಿಸಿದ್ದಾರೆ. ಬಾಲಕರ ವಿಭಾಗದಲ್ಲಿ 3000 ಮೀ. ಓಟ (ಜೀವನ್) ಪ್ರಥಮ, 400 ಮೀ. ಓಟ(ವಿಶ್ವಾಸ್) ದ್ವಿತೀಯ, 800 ಮೀ. ಓಟ (ಜೀವನ್) ತೃತೀಯ, 200 ಮೀಟರ್ ಓಟ (ವಿಶ್ವಾಸ್) ತೃತೀಯ ಬಹುಮಾನ ಗಳಿಸಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net