40ಕ್ಕೂ ಅಧಿಕ ಕಳ್ಳಬಟ್ಟಿ ಟ್ಯೂಬ್ ನಾಶ

Kallabatti Sarayi Arrack Alcohol
Published on

ಬೆಳಗಾವಿ: ನಗರಕ್ಕೆ ಸಾಗಿಸಲು ಸಂಗ್ರಹಿಸಿಟ್ಟಿದ್ದ ಸುಮಾರು 40ಕ್ಕೂ ಅಧಿಕ ಕಳ್ಳಬಟ್ಟಿ ಸಾರಾಯಿ ತುಂಬಿದ್ದ ಟ್ಯೂಬ್‌ಗಳನ್ನು ಕಾಕತಿ ಪೊಲೀಸರು ಸೋಮವಾರ ಬೆಳಗ್ಗೆ ವಶಕ್ಕೆ ಪಡೆದಿದ್ದು, ಅವುಗಳನ್ನು ನಾಶ ಮಾಡಿದ್ದಾರೆ.

ತಾಲೂಕಿನ ಕಾಕತಿ ಗ್ರಾಮದ ಬಳಿ ಇರುವ ಬರ್ಡೆ ದಾಬಾ ಹತ್ತಿರ ಘಟನೆ ನಡೆದಿದೆ. ಕಂಟ್ರಿ ಸಾರಾಯಿ ತುಂಬಿರುವ ಟ್ಯೂಬ್‌ಗಳನ್ನು ವ್ಯವಸ್ಥಿತವಾಗಿ ಮುಚ್ಚಿಟ್ಟು, ಸಾಗಣೆ ಮಾಡಲು 10 ಜನರ ಗುಂಪೊಂದು ಹೊಂಚು ಹಾಕಿತ್ತು. ಖಚಿತ ಮಾಹಿತಿಯೊಂದಿಗೆ ಪೊಲೀಸರು ದಾಳಿ ಮಾಡಿದಾಗ, ದಂಧೆಕೋರರು ಕಳ್ಳಬಟ್ಟಿ ಸಾರಾಯಿ ತುಂಬಿದ ಟ್ಯೂಬ್‌ಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಒಂದು ವೇಳೆ ಪೊಲೀಸರು ಬೆನ್ನಟ್ಟಿ ಅವರನ್ನು ಬಂಧಿಸಲು ಮುಂದಾಗಿದ್ದರೆ ಪ್ರತಿದಾಳಿ ನಡೆಸಲು ಮಾರಕಾಸ್ತ್ರಗಳೊಂದಿಗೆ ಕಳ್ಳಬಟ್ಟಿ ತಯಾರಕರು ಸಿದ್ಧರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳಬಟ್ಟಿ ಸಾಗಣೆ ಮಾಡುತ್ತಿದ್ದವನ ಬಂಧನ: ಅಥಣಿ ತಾಲೂಕಿನ ಮದಬಾವಿ-ವಜ್ರವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ಅಕ್ರಮವಾಗಿ ಕಳ್ಳಬಟ್ಟಿ ಸಾಗಣೆ ಮಾಡುತ್ತಿದ್ದ ಐನಾಪುರ ಪಟ್ಟಣದ ನಿವಾಸಿ ಶಾಮು ನಾಯಿಕ ಎಂಬಾತನನ್ನು ಅಬಕಾರಿ ಅಧಿಕಾರಿಗಳು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಆತನಿಂದ 38,100 ರೂ. ಮೌಲ್ಯದ 20
ಲೀಟರ್ ಕಳ್ಳಬಟ್ಟಿ ವಶಪಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net