ಬಿಬಿಎಂಪಿಯಲ್ಲಿ 1000 ಕೋಟಿ ರೂಪಾಯಿಗೂ ಅಧಿಕ ಅಕ್ರಮ ಪತ್ತೆ!

BBMP
ಬೊಮ್ಮನಹಳ್ಳಿ ವಲಯ ಕಚೇರಿಯಲ್ಲಿ ದಾಳಿ
Published on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಚೇರಿಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮವನ್ನು ಪತ್ತೆ ಮಾಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ, ಇಂಜಿನಿಯರಿಂಗ್ ಹಾಗೂ ಟಿಡಿಆರ್ ವಿಭಾಗಗಳಿಗೆ ಸಂಬಂಧಿಸಿದಂತೆ ಫೆ. 25ರಿಂದ ದಾಳಿ ನಡೆಸುತ್ತಿರುವ, ಇಂದು ಕೂಡ ಹಲವೆಡೆ ದಾಳಿ ನಡೆಸಿದೆ. ಆ ಮೂಲಕ ಕಂದಾಯ ವಿಭಾಗವೊಂದರಲ್ಲೇ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಸೇರಿ ಒಟ್ಟು 1 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮವನ್ನು ಪತ್ತೆ ಮಾಡಿದೆ.

ಮಾಲ್ಸ್​, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಪಾರ್ಟ್​​ಮೆಂಟ್​ಗಳಿಂದ ತೆರಿಗೆ ಧೋಖಾ, ಸರ್ಕಾರದ ತೆರಿಗೆ ನಿಯಮಗಳಡಿ ತೆರಿಗೆ ವಿಧಿಸದೆ ಭಾರಿ ಗೋಲ್​ಮಾಲ್​ ಮಾತ್ರವಲ್ಲದೆ, ಕಂದಾಯ ಅಧಿಕಾರಿಗಳು ಕಾನೂನುಬಾಹಿರವಾಗಿ ಆಕ್ಯುಪೇಷನ್​ ಸರ್ಟಿಫಿಕೇಟ್​ ನೀಡಿರುವುದು ಕೂಡ ಕಂಡುಬಂದಿದೆ.

ಇಂಜಿನಿಯರಿಂಗ್​ ವಿಭಾಗದಲ್ಲಿ ಒಂದೇ ಕಾಮಾಗಾರಿಗೆ ಎರಡೆರಡು ಬಿಲ್, ನಡೆಯದ ಕಾಮಾಗಾರಿಗಳಿಗೆ ಬಿಲ್‌ ಮಾಡಿರುವುದು, ಟಿಡಿಆರ್ ವಿಭಾಗದಲ್ಲಿ ಆಕ್ರಮವಾಗಿ ಹೆಚ್ಚು ವಿಸ್ತೀರ್ಣದ ಡಿಸಿಆರ್​ಗಳನ್ನು‌ ನೀಡಿರುವುದು ಕೂಡ ಬೆಳಕಿಗೆ ಬಂದಿದೆ. ಇಷ್ಟಕ್ಕೇ ಸುಮ್ಮನಾಗದ ಎಸಿಬಿ ನಾಳೆಯೂ ದಾಳಿಯನ್ನು ಮುಂದುವರಿಸಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net