

ಉಡುಪಿ: ಬೇಕರಿಯಲ್ಲಿರುವ ಓವನ್ ಸ್ಪೋಟಗೊಂಡು ವ್ಯಕ್ತಿ ಸಾವನ್ನಪ್ಪಿದ ಘಟನೆ ಬ್ರಹ್ಮಾವರ ತಾಲೂಕು ಮಾಬುಕಳದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಬೇಕರಿಯ ಮಾಲಿಕ ರಾಬರ್ಟ್ ಪುಟಾರ್ಡೋ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೇಕರಿ ಉತ್ಪನ್ನಗಳ ತಯಾರಿಕಾ ಘಟಕ ಇದಾಗಿದ್ದು, ದೊಡ್ಡ ಗಾತ್ರದ ಓವನ್ ಸ್ಪೋಟಗೊಂಡಿದೆ. ರಾಬರ್ಟ್ ಅವರು ಓವೆನ್ ನಿರ್ವಹಣೆಗೆಂದು ಸಮೀಪ ತೆರಳಿದಾಗ ಓವನ್ ನ ಬಾಗಿಲು ಬಡಿದು ದೇಹ ಸಂಪೂರ್ಣ ಛಿದ್ರಗೊಂಡಿದೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.