

ಧಾರವಾಡ: ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ನೇ ಸಾಲಿನ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಯನ್ನು ಶನಿವಾರ ಪ್ರದಾನ ಮಾಡಿದರು.
ಬೆಳಗಾವಿ ಜಿಲ್ಲೆ ಸಿದ್ದನಭಾವಿಯ ಸುವರ್ಣಾ ಶಂಕರಗೌಡ ಹಾದಿಮನಿ, ಹಾವೇರಿ ಜಿಲ್ಲೆಯ ಕಳಸೂರಿನ ಅನ್ನಪೂರ್ಣ ಭೀಮಪ್ಪ ಚಿಗರಿ, ಗದಗ ಜಿಲ್ಲೆಯ ಕಬಲಾಯದಕಟ್ಟಿಯ ಗೀತಾ ವಿಷ್ಣು ದೊಡ್ಡಮನಿ, ವಿಜಯಪುರ ಜಿಲ್ಲೆಯ ಮನಗೂಳಿಯ ಕಲ್ಪನಾ ಮಂಜುನಾಥ ದೊಡಮನಿ, ಬಾಗಲಕೋಟೆ ಜಿಲ್ಲೆಯ ಕುಳಲಿಯ ಕಾವೇರಿ ಗುರಪ್ಪ ಗಣಿ, ಉತ್ತರ ಕನ್ನಡ ಜಿಲ್ಲೆಯ ಕೊಪ್ಪ ಗ್ರಾಮದ ಅನ್ನಪೂರ್ಣ ನಾಗರಾಜ ಬೆಣ್ಣೆ, ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಹೊನ್ನಾಪುರದ (ಚಂದ್ರಗಿರಿಯ) ನಾಗವ್ವ ಅಮೃತ ಮಾರಿಹಾಳ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿಗೆ ಭಾಜನರಾದರು.