

ಬೈಂದೂರು: ವಿಟ್ಲದಲ್ಲಿ ಇತ್ತೀಚೆಗೆ ನಡೆದ ಜೆಸಿಐ ವಲಯ 15ರ ಮಧ್ಯಂತರ ಸಮ್ಮೇಳನದಲ್ಲಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ರೀಜನ್ ಎಫ್ನ ಉಪ್ಪುಂದ ಜೆಸಿಐಗೆ 2024ರಲ್ಲಿ ನಡೆಸಿದ ಹಲವು ವಿಭಿನ್ನ ಹಾಗೂ ವಿಶಿಷ್ಟ ಕಾರ್ಯಕ್ರಮಗಳಿಗಾಗಿ ಔಟ್ ಸ್ಟಾೃಂಡಿಂಗ್ ಅವಾರ್ಡ್ ಸೇರಿ ಹನ್ನೆರಡಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.
ವಿಟ್ಲದ ಶತಮಾನೋತ್ಸವ ಸ್ಮಾರಕ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಹಾಗೂ ವಿವಿಧ ವಲಯಾಧಿಕಾರಿಗಳಿಂದ ಉಪ್ಪುಂದ ಜೆಸಿಐ ಅಧ್ಯಕ್ಷ ಮಂಜುನಾಥ ದೇವಾಡಿಗ ಪ್ರಶಸ್ತಿ ಸ್ವೀಕರಿಸಿದರು. ಘಟಕ ಸ್ಥಾಪಕಾಧ್ಯಕ್ಷ ಎನ್.ದಿವಾಕರ ಶೆಟ್ಟಿ, ನಿಕಟ ಪೂರ್ವಾಧ್ಯಕ್ಷ ಪ್ರದೀಪ್ ಶೆಟ್ಟಿ, ಗಿರೀಶ್ ಶ್ಯಾನುಬಾಗ್, ಕಾರ್ಯದರ್ಶಿ ನರಸಿಂಹ, ಉಪಾಧ್ಯಕ್ಷ ಸಂತೋಷ್ ಮೊಗವೀರ, ಲೇಡಿ ಜೇಸಿ ಕೋ ಆರ್ಡಿನೇಟರ್ ಸುಮನಾ, ಜೆಜೆಸಿ ಅಧ್ಯಕ್ಷೆ ಸಂಜನಾ, ಶಿಲ್ಪಾ, ಸೌಮ್ಯಾ, ಶರತ್ ಶೆಟ್ಟಿ, ಹರ್ಷಾ, ಕಶೀಶ್ ಮುಂತಾದವರು ಇದ್ದರು.