

ವಿಜಯಪುರ: ನಗರದ ರಾಮಕೃಷ್ಣ ವಿದ್ಯಾ ಶಾಲೆಯಲ್ಲಿ ಇತ್ತೀಚೆಗೆ ನಡೆದ ವಲಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆಗೈದು ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರೇಖಾ ಕೀರ್ತಕ ಭಾವಗೀತೆ, ಪ್ರೇಮಾ ಜಮಖಂಡಿ ರಂಗೋಲಿ ಸ್ಪರ್ಧೆ, ಸಮರ್ಥ ಬಿರಾದಾರ ಚಿತ್ರಕಲೆ, ಜೀವಿಕಾ ಮಾನೆ ಜನಪದ ಗೀತೆ, ಮನೀಶ ಮಾಶೆಟ್ಟಿ ಪದ್ಯಕವನ ವಾಚನ, ಪಾರ್ಥ ಬಾಸಗಿ ಆಶು ಭಾಷಣ, ವಾಣೀಶ್ವರಿ ಪೂಜಾರಿ ಚರ್ಚಾ ಸ್ಪರ್ಧೆ, ಲಕ್ಷಿ$್ಮ ಗಂಗನಹಳ್ಳಿ ಹಾಗೂ ಸಚೀನ ಜಮಖಂಡಿ ರಸಪ್ರಶ್ನೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಪ್ರಕಾಶ ಗಣಿ, ಆಡಳಿತಾಧಿಕಾರಿ ದಿಲೀಪಕುಮಾರ ಪೂಜಾರಿ, ಪ್ರಾಚಾಯೆರ್ ನೀಲಮ್ಮ ಪೂಜಾರ, ಸಂಯೋಜಕಿ ಶಿವಲೀಲಾ ಪೂಜಾರಿ, ಮುಖ್ಯ ಗುರುಮಾತೆ ಹರಜೊತ ಕೌರ ಜೊಗಿ, ಆಡಳಿತ ಮಂಡಳಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.